Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ ತಾಲೂಕು ಬ್ರಾಹ್ಮಣ ಸಭಾ: ಆಟಿಡೊಂಜಿ ದಿನ

ಉಡುಪಿ ತಾಲೂಕು ಬ್ರಾಹ್ಮಣ ಸಭಾ ರಚನೆಯಾಗಿ 27ವರ್ಷಗಳನ್ನು ಕಳೆದು 28ನೇ ವರ್ಷಕ್ಕೆ ಕಾಲಿಡುತ್ತಿದೆ. ತನ್ನ 25ನೇ ವರ್ಷದ ಬೆಳ್ಳಿಹಬ್ಬವನ್ನೂ ಕೂಡ ಅತಿ ವಿಜೃಂಭಣೆ ಯಿಂದ ಆಚರಿಸಿದೆ. ಶ್ರೀ ಹರಿದಾಸ ಉಪಾಧ್ಯಾಯ ರವರಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆ ಇಂದು 26 ವಲಯಗಳನ್ನು ಹೊಂದಿದ್ದು ಅದರ ಕಾರ್ಯಕಾರಿ ಸಮಿತಿಯ ನೇತೃತ್ವದಲ್ಲಿ ಬಹಳ ವಿಶಿಷ್ಟವಾಗಿ ಮುನ್ನಡೆಯುತ್ತಿದೆ.

ಬ್ರಾಹ್ಮಣ ಸಮಾಜದ ಸಂಘಟನೆಗೆ ಶ್ರಮಿಸುತ್ತಿದೆ. ಇದೇ ತಾರೀಕು 15.08.2025 ಶುಕ್ರವಾರದಂದು ಉಡುಪಿಯ ಶ್ರೀ ದೇವಿ ಸಭಾ ಭವನ, ಕಿನ್ನಿಮುಲ್ಕಿಯಲ್ಲಿ ಬಹಳ ಸಂಭ್ರಮ ದಿಂದ ಅಂಟಿ ಡೊಂಜಿ ದಿನ, ಸ್ವಾತಂತ್ರ್ಯ ದಿನಾಚರಣೆ, ಸಾಂಸ್ಕೃತಿಕ  ಕಾರ್ಯ ಕ್ರಮಗಳ ಹಬ್ಬವನ್ನು ಆಚರಿಸಲು ನಿಶ್ಚಯಿಸಲಾಗಿದೆ. ಸುಮಾರು ಒಂದು ಸಾವಿರ ವಿಪ್ರರು ಅಂದು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಕಾರ್ಯಕ್ರಮವು ಸುಮಾರು 8.30ಕ್ಕೆ ಆರಂಭಗೊಂಡು, ಸಭಾ ಕಾರ್ಯಕ್ರಮ, ಗಣ್ಯರಿಗೆ ಸನ್ಮಾನ, ವಲಯದ ವಿಪ್ರರಿಂದ  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ವಲಯ ದವರು ಪ್ರಾಯೋಜಿಸಿದ 60ಕ್ಕೂ ಮಿಕ್ಕಿ ಖಾದ್ಯಗಳ  ಮೂಲಕ ಸಹ-ಭೋಜನ ನಡೆಯ ಲಿದ್ದು  ಸುಮಾರು ಮಧ್ಯಾಹ್ನ 2.00 ಗಂಟೆಯವರೆಗೆ ಸಮಾರಂಭ ನಡೆಯುತ್ತದೆ.

ಮಕ್ಕಳು, ಯುವಕರ ಸಮ್ಮಿಲನ ಹಿರಿಯ ಪುರುಷ-ಮಹಿಳೆಯರ ಪಾತ್ರ ಹಾಗೆ ನಮ್ಮ ಸಂಸ್ಥೆಯ ಪ್ರಧಾನ ಉದ್ದೇಶವಾದ ವಿಪ್ರ ಸಂಘಟನೆಗೆ ಆಟೀ ಸಂಸ್ಕೃತಿಗೆ ಒತ್ತನ್ನು ಕೊಡುತ್ತಿದ್ದೇವೆ. ಇದಕ್ಕೆ ಸಾಕಷ್ಟು ಪೂರ್ವಭಾವಿ ತಯಾರಿ ಎಲ್ಲರ ಸಹಕಾರದೊಂದಿಗೆ ಮಾಡಿಕೊಳ್ಳಲಾಗಿದೆ.  1000ಜನ ಸೇರುವ ನಿರೀಕ್ಷೆ ಇದ್ದು, ಸಮಾಜ ಬಂಧುಗಳು ಸಕ್ರಿವಾಗಿ ಅಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಾಲೂಕು ಅಧ್ಯಕ್ಷ ಶ್ರೀಕಾಂತ್ ಉಪಾಧ್ಯಾ ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮುಖ್ಯ ಅತಿಥಿಗಳು. ಡಾ. ಶರತ್ ಕೆ ರಾವ್, ಮಣಿಪಾಲ 
ವಿಪ್ರ ಸಂಘಟನೆ ಮತ್ತು ಆಟಿಡೊಂಜಿ ದಿನದ ಬಗ್ಗೆ ಮಾತು
ಪ್ರೊ. ಹೆರ್ಗ ಹರಿಪ್ರಸಾದ್ ಭಟ್, ಶ್ರೀಕಾಂತ್ ಉಪಾಧ್ಯ ಕೆ, ಸಭಾಧ್ಯಕ್ಷರು, ಕೆ ರಘುಪತಿ ಭಟ್, ನಿಕಟ ಪೂರ್ವ ಶಾಸಕರು, ಉಡುಪಿ ರಮೇಶ್ ಬೀಡು, ಶ್ರೀದೇವಿ ಸಭಾಭವನ, ಉಡುಪಿ ಕೃಷ್ಣ ರಾವ್ ಕೋಡಂಚ, ಖ್ಯಾತ ಉದ್ಯಮಿ, ನಗರಸಭಾ ಸದಸ್ಯರು ರಾಧಿಕಾ ನಾರಾಯಣ, ರಂಗಿತರಂಗ ಖ್ಯಾತಿಯ ಚಲನಚಿತ್ರ ನಟಿ

ಕಾರ್ಯಕ್ರಮದ ವಿವರ:
8:30 : ಧ್ವಜಾರೋಹಣ
8:30-9:30 : ನೋಂದಣಿ ಮತ್ತು ಉಪಹಾರ,
9.30-10:30 : ಉದ್ಘಾಟನೆ ಮತ್ತು ಸಾಧಕರಿಗೆ ಸನ್ಮಾನ,
10:30-12:30 ಸಮೂಹ ನೃತ್ಯ ಕಾರ್ಯಕ್ರಮ,
12:30-01:00: 2 ಸಮಾರೋಪ ಬಳಿಕ ಭೋಜನ

ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ ದುರ್ಗಾಪ್ರಸಾದ್ ಭಾರ್ಗವ್,ಕೋಶಾಧಿ ಕಾರಿ ಹಯವದನ ಭಟ್ ವೈ,  ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್, ಕನ್ನರಪಾಡಿ ವಲಯಾ ಧ್ಯಕ್ಷ ರಾಜೇಂದ್ರ ಕಿನ್ನಿಮೂಲ್ಕಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *