Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆಯುತ್ತಿರುವ ಪ್ರೊ ಪಂಜಾ ಸೀಸನ್ 2ನಲ್ಲಿ ಭಾಗವಹಿಸುತ್ತಿರುವ ಪಾಂಡೇಶ್ವರದ ಸುರೇಶ್ ಬಿ ಪೂಜಾರಿ

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆಯುತ್ತಿರುವ  ಪ್ರೊ ಪಂಜಾ ಸೀಸನ್ 2ರಲ್ಲಿ ಉಡುಪಿ ಜಿಲ್ಲೆಯ ಪಾಂಡೇಶ್ವರದ ಸುರೇಶ್ ಬಿ ಪೂಜಾರಿ ಭಾಗವಹಿಸುತ್ತಿದ್ದಾರೆ. ಪತ್ರಿ ವರ್ಷದಂತೆ ಪ್ರೊ ಪಂಜಾ ಸೀಸನ್  ಎರಡನೇ ಆವೃತ್ತಿ 5-8-25 ರಿಂದ 21-8-25 ರ ವರೆಗೂ ಮಧ್ಯ ಪ್ರದೇಶಸದ  ಗ್ವಾಲಿಯರ್ ನಲ್ಲಿ ಆರಂಭಗೊಂಡಿದೆ.   

ಅದರಲ್ಲಿ ರಾಥೋಡ್ ರೌಡಿ ತಂಡದ ಹೆಚ್ಚುವರಿ ಆಟಗಾರರಾಗಿ ಸುರೇಶ್ ಬಿ ಪೂಜಾರಿ ಪಾಂಡೇಶ್ವರ ಭಾಗವಹಿಸಿದ್ದಾರೆ ತಂಡದ ಬೇರಾವ ಆಟಗಾರರಿಗೆ ಹಾನಿಯಾದಲ್ಲಿ ಅವರಿಗೆ ಅವರ ಬದಲಾಗಿ ಆಡುವ ಅವಕಾಶ ಇವರಿಗೆ ದೊರಕಿದೆ   ಹಾಗೂ ಕರ್ನಾಟಕದಿಂದ ಮೂರು ಸ್ಪರ್ಧಿಗಳನ್ನ ವರ್ಲ್ಡ್ ರಾಂಕಿಂಗ್ ಆಧಾರದ ಮೇಲೆ ಆಯ್ಕೆಗೊಂಡಿರುತ್ತಾರೆ. ಕರ್ನಾಟಕದಿಂದ ಆಯ್ಕೆಯಾದ ಮೂವರಲ್ಲಿ  ಶ್ರೀನಿವಾಸ್, ಸುರೇಶ್ ಬಿ ಪೂಜಾರಿ ಹಾಗೂ ಮಧುರ ಕೂಡ  ಭಾಗವಹಿಸುತ್ತಿದ್ದಾರೆ.

ಇದರ ನೇರ ಪ್ರಸಾರ ಸೋನಿ ಸ್ಪೋರ್ಟ್ಸ್, ಡಿ ಡಿ ಸ್ಪೋರ್ಟ್ಸ್  ನೆಟ್ವರ್ಕ್ ನಲ್ಲಿ ಪ್ರಸಾರವಾಗಲಿದೆ  ಹಾಗೂ ಹಾಗೂ ಮೊಬೈಲ್ನಲ್ಲಿ ಫ್ಯಾನ್ ಕೋಡ್ ಅಪ್ಲಿಕೇಶನ್ ಅಲ್ಲಿ ಕೂಡ ಲಭ್ಯವಿದೆ ಈ ಪಂದ್ಯಕೂಟದಲ್ಲಿ ಆರು ತಂಡಗಳು ಭಾಗವಹಿಸುತ್ತಿವೆ.
1. Rothak Rowides,
2. Mumbai Muacle
3. Kiraak Hydarbad 
4. MP Hathods
5. Jaipur Veers
6. Sher-E-ludiana

Leave a Reply

Your email address will not be published. Required fields are marked *