
ಬ್ರಹ್ಮಾವರದ ಆಭರಣ ಜ್ಯುವೆಲರ್ಸ್ ನಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಈ ಸಮಯದಲ್ಲಿ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಗಣೇಶ್ ಪ್ರಭು ಅವರು 11 ಜನ ಮಾಜಿ ಸೈನಿಕರನ್ನು ಗೌರವಿಸಿದರು. ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಂಘಟನೆಯ ಅಧ್ಯಕ್ಷರು ಕೇಶವ ಮಲ್ಪೆ, ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ಹಾಗೆಯೇ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯ ಮುಖ್ಯ ತರಬೇತಿದಾರರಾದ ಜನಾರ್ದನ್ ಅವರು ಹಾಗೂ ಕೃಷ್ಣಪ್ಪ ಅವರು ಮತ್ತು ಮಾನಸಿಕ ಮತ್ತು ಬೌದ್ಧಿಕ ಸಾಮರ್ಥ್ಯ ನಿರ್ದೇಶಕರಾದ ವಿವೇಕ್ ಕಾಮತ್ ಉಪಸ್ಥಿತರಿದ್ದರು.
Leave a Reply