
ಸುಮಾರು 15000 ಕಿಲೋಮೀಟರುಗಳಿಗೂ ಹೆಚ್ಚು ಭೂ ಗಡಿ ಭಾಗವನ್ನು ಹೊಂದಿರುವ ಭಾರತ ದೇಶಕ್ಕೆ ಸದೃಢ ಮತ್ತು ಸಕ್ಷಮವಾದ ಭದ್ರತಾ ವ್ಯವಸ್ಥೆ ಅವಶ್ಯಕ. ಸೈನ್ಯವು ದೇಶ ಸೇವೆ ಮತ್ತು ದೇಶ ಪ್ರೇಮದ ಉನ್ನತ ಅವಕಾಶವಾಗಿದೆ. ಭಾರತೀಯ ಸೇನೆಯಲ್ಲಿ ವೈವಿಧ್ಯಮಯ ಉದ್ಯೋಗಾವಕಾಶಗಳು ಇವೆ ಎಂದು ಸಿದ್ದಾಪುರದ ನಿವೃತ್ತ ವಾಯು ಸೇನಾ ಅಧಿಕಾರಿ ಶ್ರೀ ಅನಂತ ಕೃಷ್ಣ ಎಂ.ಎಂ. ಹೇಳಿದರು.
ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರೆವೇರಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ವೃತ್ತಿಜೀವನದ ಅನೇಕ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು, ಹೆಚ್ಚಿನ ಸಂಖ್ಯೆಯಲ್ಲಿ ಎನ್.ಸಿ.ಸಿ. ಹಾಗೂ ಭಾರತೀಯ ಸೇನೆ ಸೇರಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ನಡೆಸಿದ ಭಾಷಣ ಮತ್ತು ಸಮೂಹ ಗಾಯನ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು, ವಿಶೇಷ ಶಿಬಿರದಲ್ಲಿ ಭಾಗವಹಿಸಿದ ಎನ್.ಸಿ.ಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ದೇಶ ಭಕ್ತಿ ಕುರಿತು ಭಾಷಣ ಮತ್ತು ಸಮೂಹ ಗಾಯನವನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟರಾಮ್ ಭಟ್ ಯುವಜನತೆ ದೇಶಾಭಿಮಾನವನ್ನು ಮೈಗೂಡಿಸಿ ಕೊಳ್ಳುವಂತೆ ಹೇಳಿದರು. ವಿದ್ಯಾರ್ಥಿನಿ ಕು.ಶುಶೈನಿ ಕಾರ್ಯಕ್ರಮವನ್ನು ನಿರೂಪಿಸಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ರ ಯೋಜನಾಧಿಕಾರಿ ಶ್ರೀ ರಾಮಚಂದ್ರ ಜಿ.ಎಸ್ ಸ್ವಾಗತ ಮತ್ತು ಪ್ರಸ್ತಾವನೆಗೈದರು. ಕು. ಮಾನ್ಯ ಜೆ.ಕೆ ವಂದಿಸಿದರು. ಕು. ಅಕ್ಷತಾ ಬಿರಾದಾರ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ. ವಸಂತ್ ಜಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ ೨ರ ಯೋಜನಾಧಿಕಾರಿ ಕು. ಪ್ರಜ್ಞಾ ಉಪಸ್ಥಿತರಿದ್ದರು.
Leave a Reply