Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  ಗುಜ್ಜಾಡಿಯಲ್ಲಿ 79ನೇ ಸ್ವಾತಂತ್ರ್  ದಿನಾಚರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  ಗುಜ್ಜಾಡಿಯಲ್ಲಿ 79ನೇ ಸ್ವಾತಂತ್ರ್  ದಿನಾಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ನಾರಾಯಣ ಕೆ ಅವರು ವಹಿಸಿ ಧ್ವಜಾರೋಹಣ ನೆರವೇರಿಸಿದರು.

ಈ ಸಮಾರಂಭದಲ್ಲಿ ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ತಮ್ಮಯ್ಯ ದೇವಾಡಿಗ, ಸದಸ್ಯರಾದ ಹರೀಶ್ ಮೇಸ್ತ, ತುಂಗಾ ಪೂಜಾರಿ, ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ರಾಮನಾಥ ಚಿತ್ತಾಲ, ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಉಮೇಶ್ ಮೇಸ್ತ, ಶ್ರೀ ದಯಕರ್ ಮೇಸ್ತ, ಕುಮಾರಿ ಐಶ್ವರ್ಯ. ಡಿ . ಮೇಸ್ತ, ಎಸ್ಡಿಎಂಸಿ ಉಪಾಧ್ಯಕ್ಷರು, ಸರ್ವ ಸದಸ್ಯರು, ಹಳೆ ವಿಧ್ಯಾರ್ಥಿ ಸಂಘದ ಸರ್ವ ಸದಸ್ಯರು, ಗುಜ್ಜಾಡಿ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ದೇಶಾಭಿಮಾನಿಗಳು, ದಾನಿಗಳು, ಮಕ್ಕಳ ಪೋಷಕರು , ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದ, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಾಲಾ ವಿದ್ಯಾರ್ಥಿಗಳಿಗೆ  ಶ್ರೀ ಕ್ಷೇತ್ರ ಕೊಲ್ಲೂರು ಗ್ರಾಮ ಪಂಚಾಯತ ಗುಜ್ಜಾಡಿ, ಶಾಲಾ ಹಳೆ ವಿದ್ಯಾರ್ಥಿ ಸಂಘ , ಸಿಂಚನ ಕ್ರಿಕೆಟರ್ಸ್ ಗುಜ್ಜಾಡಿ, ದೇಶ ಪ್ರೇಮಿ ಬಳಗ ನಾಯಕವಾಡಿ , ಚನ್ನಬಸವೇಶ್ವರ ಯುವಕ ಸಂಘ ನಾಯಕವಾಡಿ, ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ನಾಯಕವಾಡಿ, ಕೆನರಾ ಬ್ಯಾಂಕ್ ಗುಜ್ಜಾಡಿ, ಕೃಷ್ಣಮೂರ್ತಿ ಕೊಡಪಾಡಿ ಇನ್ನು ಹಲವಾರು ಶಾಲಾ ಅಭಿಮಾನಿಗಳು ಮಕ್ಕಳಿಗೆ ಸಿಹಿ ವಿತರಿಸಿದರು. ಶಾಲೆಯಿಂದ ಚನ್ನಬಸವೇಶ್ವರ ಸಂಘದ ವೃತ್ತದ ವರೆಗೂ ಮಕ್ಕಳ ಮೆರವಣಿಗೆ ನಡೆಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶ್ರೀ ಮತಿ ಮಾಧವಿ ನಿರೂಪಿಸಿದರು, ಶ್ರೀಮತಿ ಆಶಾ ಸ್ವಾಗತಿಸಿದರು, ಶ್ರೀಮತಿ ಸುಮನಾ ವಂದಿಸಿದರು.

Leave a Reply

Your email address will not be published. Required fields are marked *