
ಕೋಟ: ಅಚ್ಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ 2024-25ನೇ ಸಾಲಿನ ಮಹಾಸಭೆ ಸಂಘದ ಆವರಣದಲ್ಲಿ ಇತ್ತೀಚಿಗೆ ಜರುಗಿತು. ಸಂಘದ ಅಧ್ಯಕ್ಷ ಗುಂಡ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ಇದೇ ವೇಳೆ 2024-25ನೇ ಸಾಲಿನಲ್ಲಿ ದಕ್ಷಿಣಕನ್ನಡ ಒಕ್ಕೂಟದ ಉಡುಪಿ ತಾಲೂಕಿನ ಉತ್ತಮ ಪುರುಷ ಕೃತಕ ಗರ್ಭಧಾರಣಾ ಕಾರ್ಯಕರ್ತರಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ ಪೂಜಾರಿ ಆಯ್ಕೆ ಆಗಿದ್ದು ಅವರನ್ನು ಸನ್ಮಾನಿಸಲಾಯಿತು.
ಒಕ್ಕೂಟದ ಉಪವ್ಯವಸ್ಥಾಪಕ ಡಾ.ಮಾಧವ ಐತಾಳ ಲಾಭದಾಯಕ ಹೈನುಗಾರಿಕೆ ಬಗ್ಗೆ ಮಾಹಿತಿ ನೀಡಿದರು.
ಒಕ್ಕೂಟದ ವಿಸ್ತರ್ಣಾಧಿಕಾರಿ ಸರಸ್ವತಿ ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿದರು.
ಸoಘದಲ್ಲಿ 2024-2 5ನೇ ಸಾಲಿನಲ್ಲಿ 252942.59 ನಿವ್ವಳ ಲಾಭ ಬಂದಿದ್ದು 20% ಶೇರು ಡಿವಿಡೆಂಡ್ ಹಾಗೂ ಪ್ರಾಥಮಿಕ,ಪ್ರೌಢ,ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಕ್ರಿಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅತೀ ಹೆಚ್ಚು ಹಾಲು ನೀಡಿದ ಮೂವರು ಸದಸ್ಯರಿಗೆ ಪ್ರಥಮ ,ದ್ವಿತೀಯ ತೃತೀಯ ಬಹುಮಾನ ಹಾಗೂ ಸಕ್ರಿಯವಾಗಿ ಹಾಲು ನೀಡಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಸಭೆಯಲ್ಲಿ ಭಾಗವಹಿಸಿದ ಸದಸ್ಯರಿಗೆ ಲಕ್ಕಿಡಿಪ್ ಬಹುಮಾನ ಪ್ರಥಮ ಶ್ರೀಂಗೇರಿ ಶೆಟ್ಟಿ ಯಾಳಹಕ್ಲು, ದ್ವಿತೀಯ ಗೀತಾ ದೇವಾಡಿಗ ,ತೃತೀಯ ಕಾವೇರಿ ಶೆಟ್ಟಿ ಯಾಳಹಕ್ಲು ಇತರರಿಗೆ ಬಹುಮಾನ ವಿತರಿಸಲಾಯಿತು.
ಸಭೆಯಲ್ಲಿ ಶಿರಿಯಾರ ವ್ಯವಸಾಯಕ ಸೇವಾ ಸಂಘ ಸಿಇಒ ಚಂದ್ರಶೇಖರ ಶೆಟ್ಟಿ, ಅಚ್ಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಎ.ಚಂದ್ರಶೇಖರ ಶೆಟ್ಟಿ , ಕೆ ಸುರೇಂದ್ರ ಶೆಟ್ಟಿ ಮತ್ತು ಉಪಾಧ್ಯಕ್ಷ ಕೆ.ಗುಂಡು ಶೆಟ್ಟಿ , ಸಂಘ ಮಾಜಿ ಕಾರ್ಯನಿರ್ವಹಣಾಧಿಕಾರಿ ಮಂಜು ಮರಕಾಲ ಮತ್ತು ನಿರ್ದೇಶಕರಾದ ಕೆ.ಲಕ್ಷಣ ಶೆಟ್ಟಿ ,ವಿ.ವಿಠ್ಠಲ ಶೆಟ್ಟಿ, ಜಯಂತಿ ಶೆಟ್ಟಿ, ಗಿರಿಜಾ,ಅನಿತಾ ಗೀತಾ ,ಸಂಧ್ಯಾ ಹಾಗೂ ಸಂಘದ ಸಿಬ್ಬಂದಿಗಳು ಮತ್ತು ಎಲ್ಲಾ ಉತ್ಪಾದಕರ ಸದಸ್ಯರು ಉಪಸ್ಥಿತರಿದ್ದರು . ನಿರ್ದೇಶಕ ಕೆ. ಲಕ್ಷಣ ಶೆಟ್ಟಿ ಸ್ವಾಗತಿಸಿ, ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ,,ಅನಿತಾ ವಂದಿಸಿದರು.
ಅಚ್ಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆಯಲ್ಲಿ ಕಾರ್ಯಕರ್ತರಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದ.ಕ ಒಕ್ಕೂಟದ ಉತ್ತಮ ಪುರುಷ ಕೃತಕ ಗರ್ಭಧಾರಣಾ ಕಾರ್ಯಕರ್ತರಾಗಿ ಸಂತೋಷ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಶಿರಿಯಾರ ವ್ಯವಸಾಯಕ ಸೇವಾ ಸಂಘ ಸಿಇಒ ಚಂದ್ರಶೇಖರ ಶೆಟ್ಟಿ, ಅಚ್ಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಎ.ಚಂದ್ರಶೇಖರ ಶೆಟ್ಟಿ ಇದ್ದರು.
Leave a Reply