
ಕೋಟ: ಮಹಿಳಾ ವೇದಿಕೆ ಕೂಟ ಮಹಾಜದತ್ತು ಸಾಲಿಗ್ರಾಮ ಸಾಲಿಗ್ರಾಮ ಅಂಗ ಸಂಸ್ಥೆ ಇವರು ತಮ್ಮ ರಜತ ವರ್ಷ ಸಂಭ್ರಮದ ಸರಣಿ ಕಾರ್ಯಕ್ರಮದ ಅಂಗವಾಗಿ ಷೋಢಶ ಸಂಸ್ಕಾರಗಳಲ್ಲಿ ಸೀಮಂತ ಎನ್ನುವ ವಿಷಯದಲ್ಲಿ , ಯೋಗ ಗುರುಕುಲ ಪಾಂಡೇಶ್ವರ ಇದರ ಮುಖ್ಯಸ್ಥ ಡಾ ವಿದ್ವಾನ್ ವಿಜಯ ಮಂಜರ್ ಇವರಿಂದ ಉಪನ್ಯಾಸ ಮತ್ತು ಮಾಹಿತಿಯನ್ನು ಶ್ರೀಗುರು ನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ಇತ್ತೀಚಿಗೆ ಆಯೋಜಿಸಿತು.
ಸೋಡಶ ಸಂಸ್ಕಾರಗಳಲ್ಲಿ ಬಹು ಶ್ರೇಷ್ಠವಾದ ಮಹಿಳೆಯರಿಗಾಗಿ ಇರುವ ಸೀಮಂತ ಇದರ ಅರ್ಥ ಇದರ ವಿವರ ಹಾಗೂ ರೀತಿ ನೀತಿ , ಜೊತೆಗೆ ವೈಜ್ಞಾನಿಕವಾಗಿ ಗರ್ಭಿಣಿ ಮತ್ತು ಮಗುವಿನ ಮನಸ್ಸಿನ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ವಿವರಿಸಿದ ಅವರು ಪ್ರತಿಯೊಬ್ಬ ಗರ್ಭಿಣಿ ಸೀಮಂತ ಈ ಸಂಸ್ಕಾರಕ್ಕೆ ಯೋಗ್ಯಳು, ಇದನ್ನು ಪೋಷಕರು ಮಾಡಲೇಬೆಕು. ಹಾಗೂ ಈ ಮೂಲಕ ಉತ್ತಮ ಸುಸಂಸ್ಕೃತ ಸಮಾಜವಾಗಿ ಮುಂದಿನ ಭವಿಷ್ಯದ ಸಮಾಜ ರೂಪುಗೊಳ್ಳಲಿ ಎಂಬ ಅಭಿಲಾಷೆ ವ್ಯಕ್ತಪಡಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ .ಸಿ. ಹೊಳ್ಳ ಸ್ವಾಗತಿಸಿದರು. ವಿಜಯಲಕ್ಷ್ಮೀ ತುಂಗ ವಂದಿಸಿದರು. .ಕಾರ್ಯದರ್ಶಿ ಲತಾ ಹೊಳ್ಳ ನಿರೂಪಿಸಿದರು.
ಮಹಿಳಾ ವೇದಿಕೆ ಕೂಟ ಮಹಾಜದತ್ತು ಸಾಲಿಗ್ರಾಮ ಸಾಲಿಗ್ರಾಮ ಅಂಗ ಸಂಸ್ಥೆ ಇವರು ತಮ್ಮ ರಜತ ವರ್ಷ ಸಂಭ್ರಮದ ಸರಣಿ ಕಾರ್ಯಕ್ರಮದ ಅಂಗವಾಗಿ ಸೀಮಂತ ಎನ್ನುವ ವಿಷಯದಲ್ಲಿ ಡಾ ವಿದ್ವಾನ್ ವಿಜಯ ಮಂಜರ್ ಉಪನ್ಯಾಸ ನೀಡಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ .ಸಿ. ಹೊಳ್ಳ, ವಿಜಯಲಕ್ಷ್ಮೀ ತುಂಗ ಇದ್ದರು.
Leave a Reply