
ಕೋಟ: ಕೋಡಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಪರಿಸರ ಸ್ನೇಹಿ ಹಸಿರು ಜೀವ ಅಭಿಯಾನಕ್ಕೆ ಕೋಡಿ ಪರಿಸರದ ಮಹಾಬಲ ಕುಂದರ್ ಅವರ ಮನೆಯಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು.
ಮಣೂರು ಗೀತಾನಂದ ಫೌಂಡೇಶನ್, ಪಂಚವರ್ಣ ಸಂಸ್ಥೆ ಕೋಟ ಇವರ ಸಂಯೋಜನೆಯೊoದಿಗೆ ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ಹಾಗೂ ಎಸ್.ಎಲ್.ಆರ್.ಎಂ ಘಟಕ ಕೋಡಿ ಇವರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು.
ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಸದಸ್ಯರು ಪ್ರಭಾಕರ ಮೆಂಡನ್, ಕೃಷ್ಣ ಪೂಜಾರಿ, ಸತೀಶ್ ಜಿ ಕುಂದರ್, ಅಂತೋನಿ ಡಿಸೋಜಾ, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಪೂರ್ಣಿಮಾ, ಎಂ.ಬಿ.ಕೆ. ಅನಿತಾ ಕೆ., ಎಸ್.ಎಲ್.ಆರ್.ಎಂ ಸಿಬ್ಬಂದಿ ಕಿರಣ್ ಪುತ್ರನ್, ಪಿ.ಹೆಚ್.ಸಿ.ಓ ಅಮಿತಾ, ಕೋಡಿ ಕನ್ಯಾಣ ಅಂಗನವಾಡಿ ಕಾರ್ಯಕರ್ತೆ ಪ್ರೀತಿ ಎಸ್, ಕೋಡಿ ಅಂಗನವಾಡಿ ಸಹಾಯಕಿ ಸುಜಾತ ಹಾಗೂ ಸ್ಥಳೀಯರಾದ ಜಯಶೀಲ, ಪಂಚಾಯತ್ ಸಿಬ್ಬಂದಿ ರವಿ ಮತ್ತಿತರರು ಉಪಸ್ಥಿತರಿದ್ದರು. ಕೋಡಿ ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ಪಿ ಕಾರ್ಯಕ್ರಮ ನಿರ್ವಹಿಸಿದರು.
ಕೋಡಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಪರಿಸರ ಸ್ನೇಹಿ ಹಸಿರು ಜೀವ ಅಭಿಯಾನಕ್ಕೆ ಕೋಡಿ ಪರಿಸರದ ಮಹಾಬಲ ಕುಂದರ್ ಅವರ ಮನೆಯಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು. ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಸದಸ್ಯರು ಪ್ರಭಾಕರ ಮೆಂಡನ್, ಕೃಷ್ಣ ಪೂಜಾರಿ, ಸತೀಶ್ ಜಿ ಕುಂದರ್, ಅಂತೋನಿ ಡಿಸೋಜಾ ಇದ್ದರು.
Leave a Reply