Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಸ್ತಿ ಗೃಹದಲ್ಲಿ ವಸ್ತಿ ಇರದ ಅರಣ್ಯ ಇಲಾಖೆ ಸಿಬ್ಬಂದಿಗಳು

ಸಾವಳಗಿ: ಸರ್ಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸುಸಜ್ಜಿತವಾದ ವಸತಿ ಗೃಹಗಳು ನಿರ್ಮಾಣ ಮಾಡಿದ್ದಾರೆ.ಆದರೂ ಯಾವುದೇ ಸಿಬ್ಬಂದಿಗಳೂ ಅದರ ಸದುಪಯೋಗ ಪಡಿದುಕೋಳ್ಳದೆ. ಸರಕಾರದ ಹಣವನ್ನು ವ್ಯರ್ಥ ಮಾಡಿದಂತಾಗಿದೆ.ರಾತ್ರಿ ಆದರೆ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ರಾತ್ರಿ ಆದರೆ ಅಕ್ರಮವಾಗಿ ಶ್ರೀಗಂಧ ಮರ ವನ್ಯಜೀವಿಗಳಾದ ಮೂಲ ಹಾಗೂ ಕೌಜಗಳನ್ನು ಬೇಟೆ ಆಡಿ ಮಾರುತ್ತಿದ್ದಾರೆ.

ಸಿಬ್ಬಂದಿಗಳು ತಮಗೆ ಇಷ್ಟ ಬಂದಾಗ ಬರುವುದು ಹೋಗುವದು ಮಾಡುತಿದ್ದಾರೆ. ಹೊದ ವರ್ಷ ಸರಕಾರ ಅರಣ್ಯ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು  ಅನುದಾನ ಬಿಡುಗಡೆ ಮಾಡಿದ್ದು ಅದರಂತೆ ಸಿಬ್ಬಂದಿಗಳು ಅಚ್ಚುಕಟ್ಟಾಗಿ ನೇಡು ತೋಪಗಳನ್ನು ನಿರ್ವಹಣೆ ಮಾಡಿದ್ದು ಆದರೆ ಈಗ ಹೂಸದಾಗಿ ಬಂದಂತಹ ಸಿಬ್ಬಂದಿಗಳು ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.

ಸಾವಳಗಿಯ ಅರಟಾಳ ಕೆರೆ,ತುಂಗಳ ಗ್ರಾಮದ ಮಾಳಿಂಗರಾಯ ದೇವಸ್ಥಾನದ ಅಕ್ಕಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಯಾವುದೇ ತರಹದ ನಿರ್ವಹಣೆ ಇಲ್ಲದೆ ಗಿಡಗಳು ಹಾಳು ಆಗುತ್ತಿದ್ದು. ಹಳೆಯ ಸಿಬ್ಬಂದಿಗಳು ಶ್ರಮವಹಿಸಿ ಮಾಡಿದ ಕೆಲಸ ಹಾಳು ಮಾಡಿದಂತಾಗುತ್ತದೆ. ಇನ್ನಾದರು ಸಿಬ್ಬಂದಿಗಳು ಅರಣ್ಯ ಬೆಳೆಸಲು ಶ್ರಮವಹಿಸಿ ಕೆಲಸ ಮಾಡಬೇಕೆಂದು ಸ್ಥಳೀಯರ ಆಗ್ರಹವಾಗಿದೆ.

Leave a Reply

Your email address will not be published. Required fields are marked *