
ಕೋಟ: ಕೋಡಿ ಗ್ರಾಮ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಖಾರ್ವಿ ಇವರ ಅಧ್ಯಕ್ಷತೆಯಲ್ಲಿ ಕೆನರಾ ಬ್ಯಾಂಕ್ ಮತ್ತು ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಜನ ಸುರಕ್ಷಾ ಕ್ಯಾಂಪ್ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಗುರುವಾರ ಜರುಗಿತು. ಪಂಚಾಯತ್ ಅಭಿವೃದ್ದಿ ಅಧಿಕಾರಿ ರವೀಂದ್ರ ರಾವ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪಿಎಂಜೆಎವೈ , ಪಿಎಸ್‌ಎಂಬಿವೈ , ಅಟಲ್ ಯೋಜನೆ ಹಾಗೂ ಜನ್ ಧನ್ ಯೋಜನೆಗಳ ಬಗ್ಗೆ ಕೆನರಾ ಬ್ಯಾಂಕ್ ಡಿ.ಜಿ.ಎಮ್ ಮಹಮಾಯ ಪ್ರಸಾದ್ ರಾಯ್, ಬ್ಯಾಂಕ್‌ನ ವಿವಿಧ ವಿಭಾಗದ ಪ್ರಮುಖರಾದ ಡಿ ಎಮ್ ಪಿ.ಕಾರ್ತಿಕ್,ಅವಿನಾಶ್ ಕುಮಾರ್ . ಆರ್ಥಿಕ ಸಾಕ್ಷರತಾ ಕೇಂದ್ರ ಬ್ರಹ್ಮಾವರ ಇದರ ಅರ್ಪಿತಾ ಮಾಹಿತಿ ನೀಡಿದರು.
ಕೋಡಿ ಬೆಂಗ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಸಚ್ಚಿದಾನಂದ ಭಟ್ , ಪಂಚಾಯತ್ ಸದಸ್ಯರಾದ ಕೆ ಪ್ರಭಾಕರ ಮೆಂಡನ್, ಅಂತೋನಿ ಡಿಸೋಜಾ, ಕೃಷ್ಣ ಪೂಜಾರಿ ಪಿ, ಪ್ರಾಥಮಿಕ ಆರೋಗ್ಯ ಉಪಕೇಂದ್ರ, ಕೋಡಿ ಕನ್ಯಾಣ ಸಮುದಾಯ ಆರೋಗಾಧಿಕಾರಿ ಪರಸಪ್ಪ ದೊಡ್ಡಮನಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟ ಸಂಘದ ಉಪಾದ್ಯಕ್ಷೆ ಹಾಗೂ ಪದಾದಿಕಾರಿಯವರು, ನಲ್ ಜಲ್ ಮಿತ್ರರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಯವರು ಉಪಸ್ಥಿತರಿದ್ದರ.
ಕೋಡಿ ಗ್ರಾಮ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಜನ ಸುರಕ್ಷಾ ಕ್ಯಾಂಪ್ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಗುರುವಾರ ಜರುಗಿತು. ಕೋಡಿ ಬೆಂಗ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಸಚ್ಚಿದಾನಂದ ಭಟ್ , ಪಂಚಾಯತ್ ಸದಸ್ಯರಾದ ಕೆ ಪ್ರಭಾಕರ ಮೆಂಡನ್, ಅಂತೋನಿ ಡಿಸೋಜಾ, ಕೃಷ್ಣ ಪೂಜಾರಿ ಪಿ ಇದ್ದರು.
Leave a Reply