
ಕೋಟ:ಸಮಾಜದ ಕಟ್ಟ ಕಡೆಯ ಕೊರಗ ಕಾಲೋನಿಯಲ್ಲಿ ಸುಸರ್ಜಿತ ಮನೆ ನಿರ್ಮಿಸಿ ಕೊಡುವ ಗ್ರಾಮ ಪಂಚಾಯತ್ ಕೋಟತಟ್ಟು ಇವರ ಕಾರ್ಯ ನಿಜಕ್ಕೂ ದೇವರ ಪೂಜೆಗೆ ಸಮಾನ ಎಂದು ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆಎಸ್ ಕಾರಂತ್ ಅಭಿಪ್ರಾಯಪಟ್ಟರು.
ಶನಿವಾರ ಕೋಟತಟ್ಟು ಗ್ರಾಮಪಂಚಾಯತ್‌ನ ಚಿಟ್ಟಿಬೆಟ್ಟು ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ ಮನೆ ನಿರ್ಮಿಸುವ ಕಾರ್ಯಕ್ಕೆ ದೇವಸ್ಥಾನದ ವತಿಯಿಂದ ಎರಡು ಲಕ್ಷ ಚೆಕ್ ವಿತರಿಸಿ ಮಾತನಾಡಿದರು. ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ಇವರು ಗ್ರಾಮ ಪಂಚಾಯತ್ ಪರವಾಗಿ ಆಡಳಿತ ಮಂಡಳಿಗೆ ಧನ್ಯವಾದ ಸಮರ್ಪಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಗಣೇಶ್ ಮೂರ್ತಿ ನಾವಡ ಸದಸ್ಯರಾದ ಅನಂತ ಪದ್ಮನಾಭ ಐತಾಳ್, ಚಂದ್ರಶೇಖರ್ ಉಪಾಧ್ಯ ,ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಗ್ರಾಮ ಪಂಚಾಯತ್ ಸದಸ್ಯರಾದ ವಾಸು ಪೂಜಾರಿ, ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ ವಿದ್ಯಾ ಪಿ ಸಾಲಿಯಾನ್ ಉಪಸ್ಥಿತರಿದ್ದರು.
ಕೋಟತಟ್ಟು ಗ್ರಾಮಪಂಚಾಯತ್‌ನ ಚಿಟ್ಟಿಬೆಟ್ಟು ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ ಮನೆ ನಿರ್ಮಿಸುವ ಕಾರ್ಯಕ್ಕೆ ದೇವಸ್ಥಾನದ ವತಿಯಿಂದ ಶ್ರೀ ಗುರು ನರಸಿಂಹ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆಎಸ್ ಕಾರಂತ್ ಎರಡು ಲಕ್ಷ ಚೆಕ್ ವಿತರಿಸಿ ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಗಣೇಶ್ ಮೂರ್ತಿ ನಾವಡ ಸದಸ್ಯರಾದ ಅನಂತ ಪದ್ಮನಾಭ ಐತಾಳ್, ಚಂದ್ರಶೇಖರ್ ಉಪಾಧ್ಯ ಇದ್ದರು.
Leave a Reply