
ಕೋಟ: ಇಲ್ಲಿನ ಸಾಸ್ತಾನದ ಐರೋಡಿ ಮಾಬುಕಳದ ದೂಳಂಗಡಿ ಶಾಲಾ ವಠಾರದಲ್ಲಿ 16ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ಆನಂದ ಗಾಣಿಗ ವಹಿಸಿದ್ದರು. ಇದೇ ವೇಳೆ ಸಮಾಜಸೇವೆಯಲ್ಲಿ ವಿಜಯ ಪೂಜಾರಿ ಬಾಳ್ಕುದ್ರು,ರಾಮ ಕರ್ಕೇರ ದಂಡೆಬೆಟ್ಟು,ಶೈಕ್ಷಣಿಕ ಕ್ಷೇತ್ರದಲ್ಲಿ ವೀಣಾ ಶೆಟ್ಟಿ ಇವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸ್ಥಳೀಯ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಧಾರ್ಮಿಕ ಪ್ರವಚನವನ್ನು ಬಾರಕೂರು ಮಂಜುನಾಥ್ ಭಟ್ ನಾಯರಬೆಟ್ಟು ಗೈದರು.
ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ಪ್ರಣವ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪ್ರವೀಣ್ ಕುಮಾರ್,ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಸುರೇಶ್ ಅಡಿಗ,ಉದ್ಯಮಿ ಕಿರಣ್ ಮಡಿವಾಳ,ಕೆ.ಪಿ.ಟಿ.ಸಿ.ಎಲ್ ಕಾರ್ಯವಾಹಕ ಇಂಜಿನಿಯರ್ ಶ್ರೀನಿವಾಸ್ ಅಲ್ಸೆಬೆಟ್ಟು,,ಸಮಿತಿಯ ನಿಕಟಪೂರ್ವ ಅಧ್ಯಕ್ಷ ಶಿವರಾಮ ಶ್ರೀಯಾನ್,ದೂಳಂಗಡಿ ಶಾಲಾಮುಖ್ಯ ಶಿಕ್ಷಕಿ ಪ್ರಸಿಲ್ಲಾ ನೊರೋನ್ಹಾ, ಐರೋಡಿ ಪಂಚಾಯತ್ ಸದಸ್ಯ ಶೇಖರ್ ಪೂಜಾರಿ, ಸಮಿತಿ ಕಾರ್ಯದರ್ಶಿ ಗಿರೀಶ್ ಮಯ್ಯ ಉಪಸ್ಥಿತರಿದ್ದರು.ಸಮಿತಿ ಗೌರವಾಧ್ಯಕ್ಷ ಶ್ರೀಪತಿ ಅಧಿಕಾರಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಮಿತಿಯ ಪ್ರಕಾಶ್ ಕುಂದರ್ ನಿರೂಪಿಸಿ,ಕೋಶಾಧಿಕಾರಿ ಶೇಖರ್ ಮೆಂಡನ್ ವಂದಿಸಿದರು. ನಂತರ ಸಂಗೀತ ರಸಮಂಜರಿ,ಪ್ರಸಿದ್ಧ ನೃತ್ಯ ತಂಡದಿoದ ನೃತ್ಯ ಸಿಂಚನ,ಸುಪ್ರಸಿದ್ಧ ಗಾಯಕರಿಂದ ಗಾಯನ ಕಾರ್ಯಕ್ರಮ ಜರಗಿತು.
ಐರೋಡಿ ಮಾಬುಕಳದ ದೂಳಂಗಡಿ ಶಾಲಾ ವಠಾರದಲ್ಲಿ 16ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಮಾಜಸೇವೆಯಲ್ಲಿ ವಿಜಯ ಪೂಜಾರಿ ಬಾಳ್ಕುದ್ರು, ರಾಮ ಕರ್ಕೇರ ದಂಡೆಬೆಟ್ಟು, ಶೈಕ್ಷಣಿಕ ಕ್ಷೇತ್ರದಲ್ಲಿ ವೀಣಾ ಶೆಟ್ಟಿ ಇವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಬ್ರಹ್ಮಾವರ ಪ್ರಣವ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪ್ರವೀಣ್ ಕುಮಾರ್, ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಸುರೇಶ್ ಅಡಿಗ, ಉದ್ಯಮಿ ಕಿರಣ್ ಮಡಿವಾಳ ಇದ್ದರು.
Leave a Reply