Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ – ರಜತ ವರ್ಷ ಸಂಭ್ರಮ ಸರಣಿ ಕಾರ್ಯಕ್ರಮ ಪುಸ್ತಕ ಬಿಡುಗಡೆ

ಕೋಟ: ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗಸoಸ್ಥೆ ಇದರ ರಜತ ವರ್ಷ ಸಂಭ್ರಮ ಸರಣಿ ಕಾರ್ಯಕ್ರಮದಲ್ಲಿ ಇತ್ತೀಚೆಗೆ ದೇವಸ್ಥಾನದ ಜ್ಞಾನ ಮಂದಿರದಲ್ಲಿ ಜರಗಿತು. ಇದೇ ವೇಳೆ ಸುಮನ ರವೀಂದ್ರ ಹೇರ್ಳೆ ಬರೆದಿರುವ ಶ್ರೀ ಗುರು ನರಸಿಂಹ ಕಾವ್ಯಧಾರೆ ಎನ್ನುವ ಪುಸ್ತಕ ಲೋಕಾರ್ಪಣೆಗೊಂಡಿತು. ಪುಸ್ತಕದ ಪರಿಚಯವನ್ನು ಸಾಹಿತಿ ಹರಿನರಸಿಂಹ ಉಪಾಧ್ಯಾಯ ಬೆಂಗಳೂರು ಇವರು ಮಾಡಿದರು.

ಈ ಸಂದರ್ಭದಲ್ಲಿ ಸಾಹಿತಿ ಹರಿನರಸಿಂಹ ಉಪಾಧ್ಯಾಯ ಅವರನ್ನು ಗೌರವಿಸಲಾಯಿತು. ಲೇಖಕಿ ಸುಮನ ಹೆರ್ಳೆ ತನ್ನ ಅನಿಸಿಕೆ ಮತ್ತು ನೆರವಾದವರಿಗೆ ಕೃತಜ್ಞತೆ ಸಲ್ಲಿಸಿದರು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ .ಎಸ್ .ಕಾರಂತ ಪುಸ್ತಕ ಬಿಡುಗಡೆಗೊಳಿಸಿ ಅತ್ಯುತ್ತಮ ಕೃತಿ ಗಾಗಿ ಶುಭ ಹಾರೈಸಿದರು. ಬಿಡುಗಡೆಯ ಸಂದರ್ಭದಲ್ಲಿ ಸಂಗೀತ ಶಿಕ್ಷಕಿ ಮಾಲಿನಿ ರಮೇಶ್ ಕೃತಿಯ ಆಯ್ದ ಕೆಲವು ಹಾಡುಗಳನ್ನು ಹಾಡಿದರು.

ಇದೇ ಸಂದರ್ಭದಲ್ಲಿ ಸಾಹಿತ್ಯ ಅಭಿಮಾನಿ ಲೇಖಕಿ ವಿಮಲಾ ನಾವಡ ಕುಂದಾಪುರ ಇವರನ್ನು ಮಹಿಳಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಶುಭ ಹಾರೈಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ ಸಿ.ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಗೌರವ ಉಪಸ್ಥಿತಿಯಲ್ಲಿ  ಕೂಟ ಮಹಾಜಗತ್ತು  ಇದರ ಪ್ರಮುಖರಾದ ಎಚ್.ಸತೀಶ್ ಹಂದೆ, ಸಿ .ಸುರೇಶ. ತುಂಗ , ಪಿ. ಸಿ .ಹೊಳ್ಳ ವೇದಿಕೆಯಲ್ಲಿದ್ದರು. ಸುಮಂಗಲಿ ನಾವಡ ಸನ್ಮಾನ ಪತ್ರ ವಾಚಿಸಿ, ಪೂರ್ಣಿಮಾ ಅಧಿಕಾರಿ ವಂದನಾರ್ಪಣೆ ಮಾಡಿದರು.ಮಹಾಲಕ್ಷ್ಮೀ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು.

ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗಸoಸ್ಥೆ ಇದರ ರಜತ ವರ್ಷ ಸಂಭ್ರಮ ಸರಣಿ ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ ಎಸ್ . ಕಾರಂತ ಪುಸ್ತಕ ಬಿಡುಗಡೆಗೊಳಿಸಿ ಅತ್ಯುತ್ತಮ ಕೃತಿ ಗಾಗಿ ಶುಭ ಹಾರೈಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ , ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ .ಎಸ್ .ಕಾರಂತ, ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ ಸಿ. ಹೊಳ್ಳ ಇದ್ದರು.

Leave a Reply

Your email address will not be published. Required fields are marked *