
ಕೋಟ: ಇಲ್ಲಿನ ಕೋಟದ ಸಾರ್ವಜನಿಕ ಶ್ರೀಗಣೇಶೋತ್ಸವ ಸುವರ್ಣ ಸಂಭ್ರಮದ ಒಂಭತ್ತು ದಿನಗಳ ವೈಭವದ ಕಾರ್ಯಕ್ರಮಗಳಿಗೆ ಗುರುವಾರ ವರ್ಣರಂಜಿತವಾಗಿ ತೆರೆ ಎಳೆಯಲಾಯಿತು.
ಕೋಟದ ಅಮೃತೇಶ್ವರೀ ದೇಗುಲದಲ್ಲಿ ಆರಾಧಿಸಲ್ಪಟ್ಟ 50ನೇ ವರ್ಷದ ಗಣೇಶೋತ್ಸವ ವಿವಿಧ ಸಾಂಸ್ಕೃತಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಿತು.
ಗುರುವಾರ ಕೊನೆಯ ದಿನ ಮೂಡುಗಣಪತಿ ಸೇವೆ , ಅನ್ನಸಂತರ್ಪಣೆ , ಪ್ರಸಾದ ವಿತರಣೆ, ಲಕ್ಕಿಡಿಪ್ ಫಲಿತಾಂಶ ಇನ್ನಿತರ ಕಾರ್ಯಕ್ರಮಗಳೊಂದಿಗೆ ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ಉಪಸ್ಥಿತಿಯಲ್ಲಿ ತೆರೆ ಕಂಡಿತು.
ಮೆರಣಿಗೆ, ಗಮನ ಸೆಳೆದ ಸ್ಥಬ್ಧಚಿತ್ರ ಕೋಟದ ಇತಿಹಾಸದಲ್ಲೆ ಮೊದಲೆಂಬoತೆ ದೊಡ್ಡ ಮಟ್ಟದ ಜನಸಾಗರ ಸುವರ್ಣ ಸಂಭ್ರಮದಲ್ಲಿ ಸಾಕ್ಷಿಕರಿಸಿತು.
ಸಂಜೆ ಅಮೃತೇಶ್ವರೀ ದೇಗುಲದಿಂದ ಜಲಸ್ಥಂಭನಕ್ಕೆ ಹೊರಟ ಗಣೇಶ ಮೆರವಣಿಗೆ ಕೋಟದ ರಾಷ್ಟ್ರೀಯ ಹೆದ್ದಾರಿ ಮಣೂರು ಇಂದ್ರಪ್ರಸ್ಥ ಸರ್ಕಲ್ ಬಳಿಯಿಂದ ಕೋಟ ಹೈಸ್ಕೂಲ್ ಹೆದ್ದಾರಿ ಮೂಲಕ ಕೋಟ ಪಡುಕರೆ ಕಡಲಲ್ಲಿ ಜಲಸ್ಥಂಭನಗೊಳಿಸಲಾಯಿತು.
ಇದೇ ಮೊದಲಬಾರಿಗೆ ವಿವಿಧ ಸಂಘಸoಸ್ಥೆಗಳಿoದ ದೊಡ್ಡ ಮಟ್ಟದ ಸ್ಥಬ್ಧ ಚಿತ್ರಗಳು ನೆರೆದಿದ್ದವರ ಗಮನ ಸೆಳೆಯಿತು. ಕೋಟದ ಜನತಾ ಸಮೂಹ ಸಂಸ್ಥೆ ಆಪರೇಶನ್ ಸಿಂಧೂರ ಮಾದರಿಯಲ್ಲಿ ಐಎನ್ ಎಸ್ ನೌಕೆ,ಬ್ರಹ್ಮೋಸ್ ಮಾದರಿಯ ಕ್ಷಿಪಣಿ,ಸುಕೋಯ್ ಗಮನ ಸೆಳೆದರೆ,ಇತ್ತ ಬಾರಿಕೆರೆ ಯುವಕ ಮಂಡಲ ಕಜಾಸುರ, ಅರ್ಚಕ ಯುವ ಸಂಘದಿoದ ಕೊಲ್ಲೂರು ಮೂಕಾಂಬಿಕೆ ಸೇರಿದಂತೆ ವಿವಿಧ ಸ್ಥಬ್ಧಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡಿತು.
ದಾರಿ ಉದ್ದಕ್ಕೂ ಉಪಹಾರ,ಪಾನೀಯ ಸೇವೆ,ಸಿಡಿಮದ್ದು ಪ್ರದರ್ಶನ ಜನ ಆರ್ಕಷಣೆಯ ಕೇಂದ್ರವಾಯಿತು. ಸಾವಿರಾರು ಜನ ಮೆರವಣಿಗೆಯನ್ನು ಕಣ್ತುಂಬಿಕೊoಡರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ರಮಾನಾಥ್ ಜೋಗಿ, ಉಪಾಧ್ಯಕ್ಷರಾದ ಸೋಮ ಮರಕಾಲ, ಗಣೇಶ ಪೂಜಾರಿ, ಸುರೇಶ್ ಗಾಣಿಗ ಶೇವಧಿ, ಕಾರ್ಯದರ್ಶಿ ಚಂದ್ರ ಆಚಾರ್, ಕೋಶಾಧಿಕಾರಿ ಶೀಲರಾಜ್ ಕಾಂಚನ್, ಸಮಿತಿಯ ಪ್ರಮುಖರಾದ ಚಂದ್ರ ಪೂಜಾರಿ, ಜಿ.ಎಸ್ ಆನಂದ್ ದೇವಾಡಿಗ, ದೇವದಾಸ ಕಾಂಚನ್, ಉಮೇಶ್ ಕದ್ರಿಕಟ್ಟು, ಜೀವನ್, ರಂಜಿತ್ ಕುಮಾರ್ , ಗಿರೀಶ್ ದೇವಾಡಿಗ ಮತ್ತಿತರರು ಇದ್ದರು.
ಇಲ್ಲಿನ ಕೋಟದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಸಂಭ್ರಮದ ಒಂಭತ್ತು ದಿನಗಳ ವೈಭವದ ಕಾರ್ಯಕ್ರಮಗಳು ಗುರುವಾರ ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ಉಪಸ್ಥಿತಿಯಲ್ಲಿ ವರ್ಣರಂಜಿತವಾಗಿ ತೆರೆ ಕಂಡಿತು. ಸಮಿತಿ ಅಧ್ಯಕ್ಷ ರಮಾನಾಥ್ ಜೋಗಿ, ಉಪಾಧ್ಯಕ್ಷರಾದ ಸೋಮ ಮರಕಾಲ, ಗಣೇಶ ಪೂಜಾರಿ, ಸುರೇಶ್ ಗಾಣಿಗ ಶೇವಧಿ, ಕಾರ್ಯದರ್ಶಿ ಚಂದ್ರ ಆಚಾರ್ ಇದ್ದರು.
Leave a Reply