
ಕೋಟ: ಬ್ರಹ್ಮ ಶ್ರೀ ನಾರಾಯಣಗುರುಗಳ 169ನೇ ಜಯಂತೋತ್ಸವದ ಅಂಗವಾಗಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ ಬಾಳ್ಕುದ್ರು ಹಂಗಾರಕಟ್ಟೆ ವತಿಯಿಂದ ಸತ್ಯನಾರಾಯಣ ಪೂಜೆ ಮತ್ತು ಗುರುಪೂಜೆ ಕಾರ್ಯಕ್ರಮಗಳು ಸಂಘದ ಕಛೇರಿಯಲ್ಲಿ ಜರಗಿತು.
ಧಾರ್ಮಿಕ ವಿಧಿವಿಧಾನಗಳನ್ನು ವೇದಮೂರ್ತಿ ವೆಂಕಟರಮಣ (ಸೂರಿ) ಭಟ್ ಬಿರ್ತಿ ನೆರವೇರಿಸಿದರು.
ಈ ಅಂಗವಾಗಿ ಮಹಾ ಅನ್ನ ಪ್ರಸಾದ ವಿತರಣೆ ಜರಗಿತು. ಸಂಘದ ಗೌರವಾಧ್ಯಕ್ಷರಾದ ನಾರಾಯಣ ಪೂಜಾರಿ , ಗುರುಕಾರರಾದ ಕುಷ್ಟ ಪೂಜಾರಿ, ವಾಸುದೇವ್ ಕೋಟ್ಯಾನ್, ಅರ್ಚಕರಾದ ಶಂಕರ್ ಪೂಜಾರಿ, ಅಧ್ಯಕ್ಷ ವಿಜಯ ಪೂಜಾರಿ, ರವೀಂದ್ರ ಸುವರ್ಣ, ಉದೇಶ ಪೂಜಾರಿ, ಸತೀಶ್ ಪೂಜಾರಿ, ಆನಂದ ಪೂಜಾರಿ , ಮಹಿಳಾ ಘಟಕದ ಅಧ್ಯಕ್ಷ ಶಕುಂತಲಾ ವಾಸ್ ದೇವ್ ಕೋಟ್ಯಾನ್, ಬಿಲ್ಲವ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ ಬಾಳ್ಕುದ್ರು ಹಂಗಾರಕಟ್ಟೆ ವತಿಯಿಂದ ಸತ್ಯನಾರಾಯಣ ಪೂಜೆ ಮತ್ತು ಗುರುಪೂಜೆ ಕಾರ್ಯಕ್ರಮಗಳು ಸಂಘದ ಕಛೇರಿಯಲ್ಲಿ ಜರಗಿತು. ಸಂಘದ ಗೌರವಾಧ್ಯಕ್ಷರಾದ ನಾರಾಯಣ ಪೂಜಾರಿ , ಗುರುಕಾರರಾದ ಕುಷ್ಟ ಪೂಜಾರಿ, ವಾಸುದೇವ್ ಕೋಟ್ಯಾನ್, ಅರ್ಚಕರಾದ ಶಂಕರ್ ಪೂಜಾರಿ, ಅಧ್ಯಕ್ಷ ವಿಜಯ ಪೂಜಾರಿ ಇದ್ದರು.
Leave a Reply