Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಡಿ ಹೊಸಬೇಂಗ್ರೆಯಲ್ಲಿ ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆ ಪೋಷಣ್ ಅಭಿಯಾನ

ಕೋಟ: ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆ ಪೋಷಣ್ ಮಾಹೆ ಉದ್ಘಾಟನಾ ಕಾರ್ಯಕ್ರಮವನ್ನು ಹೊಸಬೆಂಗ್ರೆ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಉಡುಪಿ,ಗ್ರಾಮ ಪಂಚಾಯತ್ ಕೋಡಿ, ಶಿಶು ಅಭಿರ್ವದ್ದಿ ಯೋಜನೆ ಬ್ರಹ್ಮಾವರ ಹಾಗೂ ಆರೋಗ್ಯ ಇಲಾಖೆ ಕೋಡಿಬೆಂಗ್ರೆ ಜಂಟಿ ಆಶ್ರಯದೊಂದಿಗೆ ಏರ್ಪಡಿಸಲಾಯಿತು.

ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ ಮತ್ತು ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಪೂಜಾರಿ.ಪಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕೋಡಿ ಭಾಗದ  ಸಿ.ಎಚ್.ಓ ಪರಸಪ್ಪರ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.

ಆಶಾ ಕಾರ್ಯಕರ್ತೆ ಜ್ಯೋತಿ, ಬಾಲಾವಿಕಾಸ ಸಮಿತಿ ಸದಸ್ಯರು ಶ್ರುತಿ, ರಿಧನ್ ಮಗು ಪೋಷಕರು, ತಾಯಂದಿರು, ಸ್ತ್ರೀ ಶಕ್ತಿ ಸಂಘದ ಪದಾಧಿಕಾರಿಗಳು, ಸದಸ್ಯರು, ಅಂಗನವಾಡಿ ಪುಟಾಣಿಗಳು ಉಪಸ್ಥಿತರಿದ್ದರು. ಅಂಗನವಾಡಿ ಮೇಲ್ವಿಚಾರಕಿ ಲಕ್ಷೀಯವರು ಪ್ರಸ್ತಾವಿಕವಾಗಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಪ್ರೀತಿ ವಂದಿಸಿದರು.ಕಾರ್ಯಕ್ರಮದ ವಿಶೇಷತೆಯ ಅಂಗವಾಗಿ ಪೌಷ್ಟಿಕ ಆಹಾರಗಳು, ವಿವಿಧ ಹಣ್ಣುಗಳು, ಸೊಪ್ಪು ತರಕಾರಿಗಳು, ಬೇಳೆ ಕಾಳುಗಳು ಗಮನ ಸೆಳೆದವು.

ಕೋಡಿ ಹೊಸಬೇಂಗ್ರೆಯಲ್ಲಿ ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆ ಪೋಷಣ್ ಅಭಿಯಾನವನ್ನು ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ ಮತ್ತು ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಪೂಜಾರಿ.ಪಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕೋಡಿ ಭಾಗದ  ಸಿ.ಎಚ್.ಓ ಪರಸಪ್ಪರ, ಅಂಗನವಾಡಿ ಮೇಲ್ವಿಚಾರಕಿ ಲಕ್ಷೀ, ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್ ಕುಂದರ್ ಇದ್ದರು.

Leave a Reply

Your email address will not be published. Required fields are marked *