
ಕೋಟ: ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ. ಸಾಲಿಗ್ರಾಮ, ವಿಶ್ವಕರ್ಮ ಕಲಾವೃಂದ, ಸಾಲಿಗ್ರಾಮ, ವಿಶ್ವಜ್ಯೋತಿ ಮಹಿಳಾ ಬಳಗ, ಸಾಲಿಗ್ರಾಮ ಇವರ ಜಂಟಿ ಆಶ್ರಯದಲ್ಲಿ ಇದೇ ಸೆ. 16 ರಂದು ಮಂಗಳವಾರ ಶ್ರೀ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನ ಸಾಲಿಗ್ರಾಮ ಇಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಕಾರ್ಯಕ್ರಮ ಜರಗಲಿದ್ದು ಆ ಪ್ರಯುಕ್ತ ಪೂರ್ವಾಹ್ನ 9ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅಪರಾಹ್ನ ಅನ್ನಸಂತರ್ಪಣೆ ಸಂಜೆ 5 ರಿಂದ ವಿಶ್ವಜ್ಯೋತಿ ಮಹಿಳಾ ಬಳಗದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಸಂಜೆ 7ಕ್ಕೆ ಸಭಾ ಕಾರ್ಯಕ್ರಮ ಸಾಧಕರಿಗೆ ಸನ್ಮಾನ, ಸಂಜೆ 9 ರಿಂದ ಕಲಾ ವೇದಿಕೆ 2025 ಸಂಗೀತ – ನೃತ್ಯ – ಗಾನ ವೈಭವ,ಚೇಂಪಿ ದಿನೇಶ್ ಆಚಾರ್ಯ ರಚನೆ, ಪರಿಕಲ್ಪನೆ, ನಿರ್ದೇಶನದ ಸಂಘದ ಸದಸ್ಯರಿಂದ ನಾವ್ಯಾರು..? ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
Leave a Reply