Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಚಿತ್ರ ಬಿಡಿಸುವ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಹಾಗೂ ಕನ್ನಡ ಉಳಿಸಿ ಬೆಳೆಸಿ ಅಭಿಯಾನಕ್ಕೆ ಚಾಲನೆ ಕೊಟ್ಟ ಸ್ಪೀಕರ್ ಯುಟಿ ಖಾದರ್

ಸೆಪ್ಟೆಂಬರ್ :15 ಮುಡಿಪು ಸಾಂಬಾರ ತೋಟ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮುಡಿಪು ಸಾಂಬಾರ ತೋಟ ಇಲ್ಲಿ ಕರ್ನಾಟಕ ರಾಜ್ಯ ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆ (ರಿ.) ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದಕ್ಷಿಣ ಕನ್ನಡ ಜಿಲ್ಲೆ, ಮತ್ತು   TOP&TOPಚಾರಿಟೇಬಲ್ ಟ್ರಸ್ಟ್(R) ಕುಡ್ತಮುಗೇರು. ಇದರ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಚಿತ್ರ ಬಿಡಿಸುವ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಸಮಾರಂಭ, ಹಾಗೂ ವಿದ್ಯಾರ್ಥಿಗಳ ಕ್ರೀಡಾ ಅನುಕೂಲತೆಗಾಗಿ ಜಾರು ಕಂಬ ಉದ್ಘಾಟನೆ ಮತ್ತು ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಕ್ಕೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಚಾಲನೆ ನೀಡಿದರು.

ಕನ್ನಡ ಸಂಸ್ಕೃತಿಯ ಉಳಿವಿಗೆ, ಸರಕಾರಿ  ಶಾಲೆ ಉಳಿಸಿ ಎಂಬ ಉದ್ದೇಶದೊಂದಿಗೆ, ಆಯೋಜಿಸಿದ ಕಾರ್ಯಕ್ರಮ ನಿಜಕ್ಕೂ ಅಭಿನಂದನೀಯ. ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ತೊಡಗಿಸಿಕೊಳ್ಳುವುದಕ್ಕಾಗಿ, ಯಾವುದೇ ಪ್ರವೇಶ ಶುಲ್ಕವಿಲ್ಲದೆ, ವಿದ್ಯಾರ್ಥಿಗಳ ಮನದಾಳದಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತೆಗೆಯಲು, ಹಮ್ಮಿಕೊಂಡಿರುವ ರಾಜ್ಯಮಟ್ಟದ ಚಿತ್ರರಚನಾ ಸ್ಪರ್ಧೆ ನಿಜಕ್ಕೂ ಕೂಡ ಶ್ಲಾಘನೀಯ ಎಂದು ಸ್ಪೀಕರ್ ಯುಟಿ ಖಾದರ್ ಅಭಿಪ್ರಾಯ ಪಟ್ಟರು.

ಕನ್ನಡ ಶಾಲೆಗಳು ನಮ್ಮ ಸಂಸ್ಕೃತಿ ಮತ್ತು ಭವಿಷ್ಯದ ಮೂಲ ಸ್ತಂಭಗಳು. ಕನ್ನಡ ಭಾಷಾ ಅಭಿಮಾನದೊಂದಿಗೆ, ಅದಕ್ಕೆ ಪ್ರಪ್ರಥಮ ಆದ್ಯತೆಯನ್ನು ಕೊಟ್ಟು, ಇತರ ಭಾಷೆಗಳನ್ನು ಪ್ರೀತಿಸಿ, ಪ್ರತಿಯೊಬ್ಬ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಎಂಬ ಯುಟಿ ಖಾದರ್ ಮಾತಿನೊಂದಿಗೆ ಕನ್ನಡ ಶಾಲೆ ಉಳಿಸಿ ಬೆಳೆಸಿ ಎಂಬ ಘೋಷಣೆ ಮತ್ತಷ್ಟು ಪ್ರಭಾವಶಾಲಿಯಾಗಿ ಮೂಡಿ ಬಂತು. ಕರ್ನಾಟಕ ರಾಜ್ಯ ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆ(ರಿ.) ಇದರ ರಾಜ್ಯ ಸಂಚಾಲಕರಾದ ಮೊಯ್ದಿನ್ ಕುಟ್ಟಿ, ರಾಜ್ಯ ನಿರ್ದೇಶಕರಾದ ಉಮ್ಮರ್ ಟೆಕ್ನಿಕ್, ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಕರ್ನಾಟಕ ಇದರ ಸಂಸ್ಥಾಪಕರಾದ ಉನೈಸ್ ಪೇರಾಜೆ, ಪ್ರಮುಖರಾದ ಅವಿನಾಶ್ ಗೂನಡ್ಕ,  ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಹಾಗೂ ಟೋಪ್ ಎಂಡ್ ಟೋಪ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಹಕೀಮ್ ಪ್ರತಿಪ್ಪಾಡಿ, ನೌಫಲ್ ಕುಡ್ತ ಮುಗೇರು, ಹಾಗೂ ಎಲ್ಲಾ ಸಂಘಟನೆಗಳ ಪಧಾಧಿಕಾರಿಗಳು, ಶಾಲಾ ಎಸ್ಡಿಎಂಸಿ ಅಧ್ಯಕ್ಷರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೈ ಗೊಳ್ಳಬೇಕಾದ ಕ್ರಮಗಳ ಬಗ್ಗೆ, ಹಾಗೂ ಯಾವ ರೀತಿ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು ಎಂಬುದರ ಕುರಿತು ಸಂವಾದ ನಡೆಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ್ ಸ್ವಾಗತಿಸಿ, ಸಹ ಶಿಕ್ಷಕಿ ದೀಪ ಇವರು ವಂದಿಸಿದರು

Leave a Reply

Your email address will not be published. Required fields are marked *