
ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರ ಸಾರ್ವಜನಿಕ ಶಾರದೋತ್ಸವ ಸಮಿತಿಯ ಆಶ್ರಯದಲ್ಲಿ 32ನೇ ವರ್ಷದ ಉತ್ಸವದ ಪ್ರಯುಕ್ತ ಪಾಂಡೇಶ್ವರ ವ್ಯಾಪ್ತಿಯ ಕ್ರಿಕೆಟ್ ಪಂದ್ಯಾಕೂಟ ಕಾರ್ಯಕ್ರಮ ಭಾನುವಾರ ಪಾಂಡೇಶ್ವರ ಶಾಲಾ ಮೈದಾನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಾಂಸ್ಕöÈತಿಕ ಚಿಂತಕ ಆಲ್ವಿನ್ ಅಂದ್ರಾದೆ, ಯೋಧರಾದ ದಿನಕರ್ ಹಾಡಮನೆ , ಕಳಿಬೈಲು ಶ್ರೀಕ್ಷೇತ್ರದ ಧರ್ಮದರ್ಶಿ ಅಭಿಜಿತ್ ಪಾಂಡೇಶ್ವರ , ವಿವಿಧ ತಂಡಗಳ ಮಾಲಿಕರು ಹಾಗೂ ಕ್ರೀಡಾ ಭಿಮಾನಿಗಳು ಹಾಗೂ ಸಮಿತಿಯ ಸದ್ಯಸರು ಉಪಸ್ಥಿತರಿದ್ದರು.
Leave a Reply