
ಕೋಟ: ಗುಂಡ್ಮಿ ಭಟ್ಟ ಮಾಣಿ ಶಂಕರನಾರಾಯಣ ದೇವಸ್ಥಾನದ ವಠಾರದಲ್ಲಿ ಅಶಕ್ತರಿಗೆ ಸಹಾಯಧನ ವಿತರಿಸುವ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಾರ್ಕಡ ಚಂದ್ರಶೇಖರ ಸೂಮಯಜಿ ಅವರ ಮಡದಿ, ಪಾರಂಪಳ್ಳಿ ಶಿವಾನಂದ ಉಪಾಧ್ಯ, ಮತ್ತು ಅಪಘಾತದಲ್ಲಿ ಮೃತಪಟ್ಟ ಕೇಶವ ಮರಕಾಲ ಅವರ ಪತ್ನಿ ಲಲಿತಾಳಿಗೆ ಒಟ್ಟು 40,000 ರೂಪಾಯಿಗಳನ್ನು ವಿತರಿಸಲಾಯಿತು.
ಪರಿಸರದ ಎಲ್ಲಾ ಗೋಶಾಲೆಗಳಿಗೂ ಪ್ರತಿ ವರ್ಷ ಮೇವುಗಳನ್ನು ಒದಗಿಸಿದ್ದು, ಶ್ರೀ ಮಹಾವಿಷ್ಣು ವೈದಿಕ ಮಂದಿರ ಸಮಾಜಮುಖಿ ಕೆಲಸವನ್ನು ಮಾಡುತ್ತಿದೆ.
ಸಮಾರಂಭದಲ್ಲಿ ಸಾಲಿಗ್ರಾಮ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಅನಂತ ಪದ್ಮನಾಭ ಐತಾಳ, ಚಂದ್ರಶೇಖರ ಉಪಾಧ್ಯ ಗುಂಡ್ಮಿ ಶುಭ ಹಾರೈಸಿದರು. ಭಗವತಿ ಅಮ್ಮನವರ ದೇವಸ್ಥಾನದ ಆಡಳಿತ ಮಂಡಳಿಯ ನೂತನ ಸದಸ್ಯರಾದ ಶಿವಾನಂದ ಮಯ್ಯ, ಉದಯ ಕುಮಾರಮಯ್ಯ, ರಾಜಮಯ್ಯ, ಹಾಗೂ ಹಿರಿಯರಾದ ಮಹಾಬಲಮಯ್ಯ, ರಾಮಚಂದ್ರ ಐತಾಳ್, ಸುಬ್ರಾಯ ಮಯ್ಯ ಇದ್ದರು.
ಗುಂಡ್ಮಿ ಭಟ್ಟ ಮಾಣಿ ಶಂಕರನಾರಾಯಣ ದೇವಸ್ಥಾನದ ವಠಾರದಲ್ಲಿ ಅಶಕ್ತರಿಗೆ ಸಹಾಯಧನ ವಿತರಿಸುವ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಸಾಲಿಗ್ರಾಮ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಅನಂತ ಪದ್ಮನಾಭ ಐತಾಳ, ಚಂದ್ರಶೇಖರ ಉಪಾಧ್ಯ ಗುಂಡ್ಮಿ, ಭಗವತಿ ಅಮ್ಮನವರ ದೇವಸ್ಥಾನದ ಆಡಳಿತ ಮಂಡಳಿಯ ನೂತನ ಸದಸ್ಯರಾದ ಶಿವಾನಂದ ಮಯ್ಯ, ಉದಯ ಕುಮಾರ ಮಯ್ಯ ಇದ್ದರು.
Leave a Reply