
ಪುತ್ತೂರು ಬ್ರಾಹ್ಮಣ ಮಹಾಸಭಾ ವತಿಯಿಂದ ಶ್ರೀ ಪುತ್ತೂರು ದುರ್ಗಾಪರಮೇಶ್ವರಿ ದೇವಳದ ಸಭಾಗ್ರಹದಲ್ಲಿ ತಿಂಗಳ ಕಾರ್ಯಕ್ರಮದ ಅಂಗವಾಗಿ ಹಿತ್ತಲ ಗಿಡ ಮದ್ದು ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಖ್ಯಾತ ಆಯುರ್ವೇದ ವೈದೈ ಡಾ. ಸಂಧ್ಯಾ ರಂಜನ್ ಅವರು ಮಾತನಾಡುತ್ತಾ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸುಲಭವಾಗಿ ಸಿಗುವ ಧವಸ ಧಾನ್ಯಗಳ ಮತ್ತು ಗಿಡಮೂಲಿಕೆಗಳ ಸಮರ್ಪಕ ಉಪಯೋಗದ ಮೂಲಕ ಆರೋಗ್ಯವನ್ನು ಕಾಪಾಡುವ ಬಗ್ಗೆ ಮನಮುಟ್ಟುವಂತೆ ಮಾಹಿತಿ ನೀಡಿದರು. ಮಹಾಸಭಾ ಅಧ್ಯಕ್ಷ ಚಂದ್ರಶೇಖರ ಅಡಿಗ ಸ್ವಾಗತಿಸಿದರು. ಕೋಶಾಧಿಕಾರಿ ಕೆ.ಜಿ. ರಾಮಚಂದ್ರರಾವ್, ಆಪದ್ಬಾಂಧವ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಜೋಷಿ, ನಿಕಟಪೂರ್ವ ಅಧ್ಯಕ್ಷೆ ಶುಭಾ ಬಾಳ್ತಿಲ್ಲಾಯ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಮಂಜುಳಾ ವಿ. ಪ್ರಸಾದ್ ಇವರ ಸಂಯೋಜನೆಯಲ್ಲಿ ನಾನಾ ಬಗೆಯ ಆಷಾಡದ ಖಾದ್ಯಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ಚೈತನ್ಯ ಎಂ. ಜಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಿರಂಜನ್ ಭಟ್ ವಂದನಾರ್ಪಣೆಗೈದರು.*
Leave a Reply