
ಕೋಟ: ಇಲ್ಲಿನ ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದಲ್ಲಿ ವಾರ್ಷಿಕ ಶರನ್ನವರಾತ್ರಿ ಉತ್ಸವದ ವಿಜಯದಶಮಿಯ ಅಂಗವಾಗಿ ಚಂಡಿಕಾ ಸಪ್ತಸತಿ ಪಾರಾಯಣ,ದುರ್ಗಾಹೋಮ ಕಾರ್ಯಕ್ರಮಗಳು ಜರಗಿದವು. ಸೇವಾಕರ್ತರಾಗಿ ಶ್ರೀ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ ಕುಂದರ್ ದಂಪತಿಗಳು ಭಾಗಿಯಾಗಿದರು.
ಧಾರ್ಮಿಕ ಕೈಂಕರ್ಯವನ್ನು ವೇ.ಮೂ ಮಧುಸೂದನ ಬಾಯರಿ ನೇತೃತ್ವದಲ್ಲಿ ಜರಗಿತು. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ ಆನಂದ್ ಸಿ ಕುಂದರ್ ಸೇವಾಕರ್ತ ಕುಟುಂಬ ಸಮೇತರಾಗಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪ್ರಶಾಂತ್ ಕುಂದರ್ ದಂಪತಿಗಳು ,ರಕ್ಷಿತ್ ಕುಂದರ್ ದಂಪತಿಗಳು , ದೇಗುದ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಣೇಶ್ ನೆಲ್ಲಿಬೆಟ್ಟು, ಸುಧಾ ಎ ಪೂಜಾರಿ, ಜ್ಯೋತಿ ಡಿ.ಕಾಂಚನ್, ಶಿವ ಪೂಜಾರಿ,ರತನ್ ಐತಾಳ್, ಚಂದ್ರ ಆಚಾರ್, ಸುಬ್ರಾಯ ಜೋಗಿ, ಮಾಜಿ ಟ್ರಸ್ಟಿಗಳಾದ ಚಂದ್ರ ಪೂಜಾರಿ,ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ, ಅರ್ಚಕ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಾವಿರಾರು ಭಕ್ತಾಧಿಗಳು ಭಾಗಿ ವಿಜಯದಶಮಿ ಅಂಗವಾಗಿ ದೇಗುಲದಲ್ಲಿ ಪೂರ್ವಾಹ್ನದಿಂದಲೇ ಸಾವಿರಾರು ಭಕ್ತಾಧಿಗಳು ದೇವರ ದರ್ಶನ ಪಡೆದು ಅಪರಾಹ್ನ ನಡೆದ ಮಹಾಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಅಮೃತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿವಿಧ ಭಜನಾ ತಂಡಗಳಿoದ ಭಜನಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದಲ್ಲಿ ವಿಜಯದಶಮಿ ಉತ್ಸವದ ದಿನದ ಉತ್ಸವದಲ್ಲಿ ಸೇವಾಕರ್ತರಾಗಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ ಆನಂದ್ ಸಿ ಕುಂದರ್ ಕುಟುಂಬ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು.
Leave a Reply