Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಿಡಿಒ ಅಪ್ಪಾಸಾಬ ಎಡಕೆ ವರ್ಗಾವಣೆ: ಸನ್ಮಾನ ಕಾರ್ಯಕ್ರಮ

ಸಚೀನ ಆರ್ ಜಾಧವ

ಸಾವಳಗಿ: ಗ್ರಾಮಗಳು ಅಭಿವೃದ್ಧಿ ಆಗಬೇಕಾದರೆ ಮೋದಲು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಮೂಲಕ ಆಗಬೇಕು, ನಮ್ಮ ಅರಟಾಳ ಗ್ರಾಮಕ್ಕೆ ಎಲ್ಲ ರೀತಿಯ ಸೌಲಭ್ಯಗಳನ್ನು, ಮೂಲಭೂತ ಸೌಕರ್ಯ ಒದಗಿಸುವುದರ ಮೂಲಕ ಇತರ ಪಿಡಿಒಗಳಿಗೆ ಮಾರ್ಗದರ್ಶಕರಾದ ಅಪ್ಪಾಸಾಬ ಎಡಕೆ ಅವರ ಕಾರ್ಯ ಶ್ಲಾಘನೀಯ ಎಂದು ರಾಜಕುಮಾರ್ ಮಾಡಗ್ಯಾಳ ಹೇಳಿದರು.

ರಾಜ್ಯದಲ್ಲಿ ಪಿಡಿಒಗಳ ವರ್ಗಾವಣೆ ಹಿನ್ನಲೆಯಲ್ಲಿ ಅಥಣಿ ತಾಲೂಕಿನ ಅರಟಾಳ ಗ್ರಾಮ ಪಂಚಾಯತಯ ಅಭಿವೃದ್ಧಿ ಅಧಿಕಾರಿಗಳಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಪ್ಪಾಸಾಬ ಎಡಕೆ ಅವರು ವರ್ಗಾವಣೆಗೊಂಡಿದರಿಂದ ನಗರದಲ್ಲಿ ಸನ್ಮಾನಿಸಲಾಯಿತು

ನಂತರ ಮಾತನಾಡಿದ ಅರಟಾಳ ಗ್ರಾಮ ಪಂಚಾಯತ ಅಧ್ಯಕ್ಷೇ  ಕಾಂತಾಬಾಯಿ ಹಟ್ಟಿ ಅವರು ಗ್ರಾಮ ಪಂಚಾಯತಿ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ, ಮುಂದೆ ಇದೇ ರೀತಿ ತಮ್ಮ ಕಾರ್ಯ ಮುಂದುವರೆಯಲಿ ಎಂದು ಶುಭ ಹಾರೈಸಿದರು.

ಎಂಟು ವರ್ಷಗಳ ಕಾಲ ನನಗೆ ನೀಡಿದ ಸಹಕಾರಕ್ಕೆ ನಿಮಗೆ ಚಿರಋಣಿ, ಹಾಗೂ ಅಧ್ಯಕ್ಷ ಉಪಾಧ್ಯಕ್ಷ ಗ್ರಾಮದ ಸಮಸ್ತ ಗುರು ಹಿರಿಯರಿಗೂ ನನ್ನ ನಮನಗಳು, ಮುಂದೆ ಬರುವ ಪಿಡಿಒ ಅವರಿಗೂ ಸಹ ಇದೇ ರೀತಿ ಸಹಕಾರ ನೀಡಿ ಎಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಅಪ್ಪಾಸಾಬ ಎಡಕೆ ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರು, ಊರಿನ ಹಿರಿಯರು ಯುವಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *