Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ ಹಿರಿಯರಿಗೆ ಸಂಮಾನ, ವಿದ್ಯಾರ್ಥಿ ವೇತನ, ವೈದ್ಯಕೀಯ ನೆರವು ಹಸ್ತಾಂತರ

ಕೋಟ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ  ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷ  ಯಂ ಶಿವರಾಮ ಉಡುಪ ಇವರ ಅಧ್ಯಕ್ಷತೆಯಲ್ಲಿ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ಇತ್ತೀಚೆಗೆ ಜರುಗಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ. ಎಸ್.ಕಾರಂತ ಇವರು ಹಿರಿಯ ದಂಪತಿಗಳಾದ ಪಿ. ಗಂಗಾಧರ ಹೆಳೆ೯ ಮತ್ತು  ಜಾಹ್ನವಿ ಪಿ. ಹೆಳೆ೯ ಹಾಗೂ  ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಮತ್ತು ವಿಜಯಲಕ್ಷ್ಮೀ ಇವರನ್ನು ಸನ್ಮಾನಿಸಿದರು .

ಸಾಧಕರಿಗೆ ಸನ್ಮಾನ-
ಕರ್ನಾಟಕ ಸರ್ಕಾರ ಯಕ್ಷಗಾನ ಕಲಾ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಪುರಸ್ಕೃತರಾದ  ಎಚ್.ಸುಜಯೀಂದ್ರ ಹಂದೆ, ಭಾರತ ಸರ್ಕಾರದ ಸಂಸ್ಕೃತಿ  ಇಲಾಖೆಯ ರಾಷ್ಟ್ರೀಯ ಫೆಲೋಶಿಪ್ ಪುರಸ್ಕೃತರಾದ ಎಚ್. ಸುದರ್ಶನ ಉರಾಳ, ಸಮಾಜ ಸೇವಕ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೆ. ತಾರಾನಾಥ ಹೊಳ್ಳ, ಹಾಗೂ ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ಪ್ರಗತಿ ಪರ ಕೃಷಿಕ  ಕೆ. ಶಿವಮೂರ್ತಿ ಇವರನ್ನು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ  ಸಂದೀಪ ಮಂಜ ಇವರು ಸಭಾದ ಪರವಾಗಿ ಸನ್ಮಾನಿಸಿ, ಸಾಲಿಗ್ರಾಮ ಬ್ರಾಹ್ಮಣ ಮಹಾಸಭಾದ ಕಾರ್ಯಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ , ನಾವೆಲ್ಲ ಸಂಘಟಿತರಾಗದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗಬಹುದು ಹಾಗಾಗಿ ನಾವು ಸಂಘಟಿತರಾಗುವುದು ಅತ್ಯಂತ ಅವಶ್ಯಕ ಎಂದು ಹೇಳಿದರು.

ಪ್ರತಿಭಾ ಪುರಸ್ಕಾರ-
2025ರ ಎಸ್ ಎಸ್ ಎಲ್ ಸಿ ಯಲ್ಲಿ ಅಧಿಕ ಅಂಕ ಪಡೆದ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕು. ಪ್ರಸನ್ನ ಕುಮಾರ್ ಹಾಗೂ ಚೇತನಾ ಪ್ರೌಢಶಾಲೆಯ ಕು. ವೈಷ್ಣವಿ ಅಲ್ಸೆ ಯವರಿಗೆ ನಗದು ಪುರಸ್ಕಾರ ನೀಡಲಾಯಿತು.

ಅಶಕ್ತರಿಗೆ ಪರಿಹಾರ –
ಕಾರ್ಕಡ ಗ್ರಾಮದ ಇಬ್ಬರು,  ವಡ್ಡರ್ಸೆ ಗ್ರಾಮದ ಇಬ್ಬರು ಮತ್ತು ಕೋಟತಟ್ಟು ಗ್ರಾಮದ ಒಬ್ಬರು ಅಶಕ್ತರಿಗೆ ತಲಾ ಹತ್ತು ಸಾವಿರ ರೂಪಾಯಿ ವೈದ್ಯಕೀಯ ನೆರವು ವಿತರಿಸಲಾಯಿತು.

ಬಹುಮಾನ ವಿತರಣೆ –
ಮಹಾಸಭೆ ಸಂಬoಧ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಭಟ್ ರವರು ವಿತರಿಸಿ ಪ್ರಸ್ತುತ ಸಂಘಟನೆಯ ಅಗತ್ಯದ ಕುರಿತು ತಿಳಿಸಿದರು.

ವಿದ್ಯಾರ್ಥಿ ವೇತನ ವಿತರಣೆ –
ವಲಯದ ವ್ಯಾಪ್ತಿಯಲ್ಲಿ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಇಂಜಿನೀಯರಿoಗ್, ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿಪ್ರ ಸಮಾಜದ ಸುಮಾರು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಮಾರು 3 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಗಿರಿಜಾ ಶಂಕರ ನಾರಾಯಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ 5 ಮಂದಿ ಅಶಕ್ತರಿಗೆ ತಲಾ ಹತ್ತು ಸಾವಿರ ರೂ. ಹಾಗೂ ಒಬ್ಬರಿಗೆ ಶೈಕ್ಷಣಿಕ ನೆರವು ವಿತರಿಸಲಾಯಿತು. ಸಾಲಿಗ್ರಾಮ ವಿಪ್ರ ಮಹಿಳಾ ವಲಯದ ಅಧ್ಯಕ್ಷೆ  ವನಿತಾ ಉಪಾಧ್ಯ ಉಪಸ್ಥಿತರಿದ್ದರು.
ಉಪಾಧ್ಯಕ್ಷ  ಪಟ್ಟಾಭಿರಾಮ ಸೋಮಯಾಜಿ ಸ್ವಾಗತಿಸಿದರು. ಕೋಶಾಧಿಕಾರಿ  ಸುಬ್ರಹ್ಮಣ್ಯ ಹೇಳೆ೯ ವಿದ್ಯಾರ್ಥಿ ವೇತನ ವಿವರ ನೀಡಿದರು. ಕಾರ್ಯದರ್ಶಿ  ಕೆ ರಾಜಾರಾಮ ಐತಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಶುಭಾ ಅಡಿಗ ಮತ್ತು  ಲಕ್ಷ್ಮಿ ನಾರಾಯಣ ಅಡಿಗೆ ಬಹುಮಮಾನಿತರ ಪಟ್ಟಿ ವಾಚಿಸಿದರು. ಕೃಷ್ಣ ಪ್ರಸಾದ ಹೇಳೆ9 ಪಾರಂಪಳ್ಳಿ,  ಬಿ.ಜಿ. ಸತೀಶ ಉಡುಪ ಚಿತ್ರಪಾಡಿ,  ನಾಗರಾಜ ಉಪಾಧ್ಯಕಾಕ೯ಡ, ಸುಬ್ರಾಯ ಮೈಯ್ಯ ಗುಂಡ್ಮಿ, ವಿಶ್ವನಾಥ ಹೇಳೆ೯ ಎಡಬೆಟ್ಟು , ಪಿ. ಸಿ. ಹೊಳ್ಳ ಪಾಂಡೇಶ್ವರ,  ಸುಬ್ರಾಯ ಉರಾಳ ಚಿತ್ರಪಾಡಿ, ನಾಗರಾಜ ಮಧ್ಯಸ್ಥ ಕಾಕ9ಡ ಮುಂತಾದವರು ಸಹಕರಿಸಿದರು.

ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ  ಇದರ ವಾರ್ಷಿಕ ಮಹಾಸಭೆಯಲ್ಲಿ ಕರ್ನಾಟಕ ಸರ್ಕಾರ ಯಕ್ಷಗಾನ ಕಲಾ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಪುರಸ್ಕೃತರಾದ   ಎಚ್.ಸುಜಯೀಂದ್ರ ಹಂದೆ, ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯ ರಾಷ್ಟ್ರೀಯ ಫೆಲೋಶಿಪ್ ಪುರಸ್ಕೃತರಾದ ಎಚ್. ಸುದರ್ಶನ ಉರಾಳ, ಸಮಾಜ ಸೇವಕ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ  ಕೆ. ತಾರಾನಾಥ ಹೊಳ್ಳ, ಹಾಗೂ ದ.ಕ.ಜಿಲ್ಲಾ ಸಹಕಾರೀ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ಪ್ರಗತಿ ಪರ ಕೃಷಿಕ  ಕೆ. ಶಿವಮೂರ್ತಿ ಇವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *