
ಕೋಟ: ಯಕ್ಷಗಾನ ಕ್ಷೇತ್ರದಲ್ಲಿ ಪ್ರಸಿದ್ದ ಭಾಗವತರೆನಿಸಿಕೊಂಡ ರಂಗತಜ್ಞ, ಹೊಸತನವನ್ನು ಯಕ್ಷಗಾನೀಯವಾಗಿ ಪರಿವರ್ತಿಸಬಲ್ಲ ಅದ್ಭುತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರ ಸಂಸ್ಮರಣಾ ಕಾರ್ಯಕ್ರಮವು ಇಂದು 09-10-2025 ರಂದು ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ. ಧಾರೇಶ್ವರರ ಹೆಸರಿನಲ್ಲಿ ನೀಡಲಾಗುವ “ ನಮ್ಮ ಧಾರೇಶ್ವರ” ಪ್ರಶಸ್ತಿಯನ್ನು ಭಾಗವತ ಪೆರ್ಲ ಸತ್ಯನಾರಾಯಣ ಪುಣೆಂಚಿತ್ತಾಯರಿಗೆ ನೀಡಿ ಪುರಸ್ಕರಿಸಲಾಗುವುದು. ಪತ್ರಕರ್ತ ರವೀಂದ್ರ ಕೋಟ ಇವರು ಪ್ರಶಸ್ತಿ ಪುರಸ್ಕೃತರ ಅಭಿನಂದನಾ ನುಡಿ ಆಡಲಿರುವರು.
ಕಲಾಕೇಂದ್ರದ ಅಧ್ಯಕ್ಷರಾದ ಆನಂದ.ಸಿ.ಕುoದರ್ ಅಧ್ಯಕ್ಷತೆಯನ್ನು ವಹಿಸಲಿದ್ದು, ಜಯಪ್ರಕಾಶ ಹೆಗ್ಡೆ, ಕನ್ನಡ ಮತ್ತು ಸಂಸ್ಕೃತಿಯ ಶ್ರೀಮತಿ ಪೂರ್ಣಿಮಾ, ಹಾರಾಡಿ ನಿತ್ಯಾನಂದ ಶೆಟ್ಟಿ, ಅಮಾಸೆಬೈಲ್ ಶಂಕರ್ ಐತಾಳ್ ಹಾಗೂ ರಾಜೇಶ ಉಪಾಧ್ಯ ಪಾರಂಪಳ್ಳಿ, ರವೀಂದ್ರ ಐತಾಳ ಪಡುಕೆರೆಯವರು ಉಪಸ್ಥಿತರಿರುವರು. ಸಭಾಕಾರ್ಯಕ್ರಮದ ನಂತರ ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ ಒಡ್ಡೋಲಗ, ಹಾಗೂ ಹಿರಿಯ ಕಲಾವಿದರಿಂದ ತಾಮ್ರಧ್ವಜ ಕಾಳಗ ಯಕ್ಷಗಾನವಿದೆಯೆಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ತಿಳಿಸಿದ್ದಾರೆ.
Leave a Reply