
ಕೋಟ: ಇಲ್ಲಿನ ಮಣೂರು ಪರಿಸರದ ಸ್ನೇಹಕೂಟ ಮಣೂರು ಇದರ ದಶಮ ಸಂಭ್ರಮ ಇದೇ ಬರುವ ಡಿಸೆಂಬರ್ 25ರಂದು ಆಚರಿಸಿಕೊಳ್ಳಲಿದ್ದು ಇದರ ಪೂರ್ವಭಾವಿ ಸಭೆ ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ದಶಮಾನೋತ್ಸವ ಸಮಿತಿ ಅಧ್ಯಕ್ಷ ಆನಂದ್ ಸಿ ಕುಂದರ್ ವಹಿಸಿ ಸಲಹೆ ಸೂಚನೆ ಮಾರ್ಗದರ್ಶನ ನೀಡಿದರು.
ಸ್ನೇಹಕೂಟ ಸಂಚಾಲಕಿ ಭಾರತಿ ವಿ ಮಯ್ಯ ದಶಮಾನೋತ್ಸವ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಸಭೆಯಲ್ಲಿ ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ದಶಮಾನೋತ್ಸವ ಸಮಿತಿಯ ಪ್ರಮುಖರಾದ ಎಂ ಎನ್ ಮಧ್ಯಸ್ಥ, ನಿಲಾವರ ಸುರೇಂದ್ರ ಅಡಿಗ, ವಿಷ್ಣುಮೂರ್ತಿ ಮಯ್ಯ, ಅರುಣಾಚಲ ಮಯ್ಯ, ಶ್ರೀಕಾಂತ್ ಶೆಣೈ, ಕೆ.ತಾರಾನಾಥ ಹೊಳ್ಳ, ಸದಾಶಿವ ಹೊಳ್ಳ ಸೇರಿದಂತೆ ಹಲವರು ಭಾಗಿಯಾದರು.ಸಭೆಯನ್ನು ಸ್ನೇಹಕೂಟದ ಸುಜಾತ ಬಾಯರಿ ಸ್ವಾಗತಿಸಿ ವಂದಿಸಿದರು.
Leave a Reply