
ಕೋಟ: ಅಳಿವುದು ಕಾಯ, ಉಳಿಯುವುದು ಕೀರ್ತಿ. ಸಿಕ್ಕ ಕಿರು ಅವಧಿಯಲ್ಲಿಯೇ ಸಮಾಜಕ್ಕೆ ಅಗಾಧ ಕೊಡುಗೆ ನೀಡಿ ಇಹಲೋಕ ತ್ಯಜಿಸಿ ಅಮರನಾದ ಶ್ರೀನಿಧಿ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಅಸಾಧಾರಣ ವ್ಯಕ್ತಿತ್ವ ತೋರಿದವರು. ಅವಸರವಸರವಾಗಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಅವಸರವಸರವಾಗಿಯೇ ಬದುಕಿನಿಂದ ನಿರ್ಗಮಿಸಿದ್ದು ಸಮಾಜಕ್ಕೆ ದೊಡ್ಡ ನಷ್ಟ ಎಂದು ಮಾಜಿ ಅಸಿಸ್ಟೆಂಟ್ ಗರ್ನರ್ ರೊ. ಚಂದ್ರಶೇಖರ ಮೆಂಡನ್ ಪುಷ್ಪ ನಮನ ಸಲ್ಲಿಸಿ ಸಂಸ್ಮರಣಾ ನುಡಿಗಳನ್ನಾಡಿದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಅಕ್ಟೋಬರ್ 19ರಂದು ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರೋಟರಿ ಕ್ಲಬ್ ಕೋಟ ಸಿಟಿ, ಆನ್ಸ್ ಕ್ಲಬ್ ಕೋಟ ಸಿಟಿ ಹಾಗೂ ಮಹಂಕಾಳಿ ಫ್ರೆಂಡ್ಸ್ ಕೊರವಡಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ಮೃತಿಗಳಲ್ಲಿ ಶ್ರೀನಿಧಿ’ ಶ್ರೀನಿಧಿ ಉಪಾಧ್ಯ ಸಂಸ್ಮರಣೆಯಲ್ಲಿ ರೋಟರಿ ಕ್ಲಬ್ ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್ ಮೃತರ ಸಮಾಜಿಕ ಕಾರ್ಯಗಳನ್ನು ಸ್ಮರಿಸಿದರು.
ಭಗವಂತನ ಸೇವೆಗಾಗಿ ಮಂತ್ರಾಲಯ ಕ್ಷೇತ್ರ ಸಂದರ್ಶನ ಮಾಡಿ, ಸ್ನೇಹಿತ ಬಂಧು ಬಳಗದವನ್ನು ಮಾತನ್ನಾಡಿಸುತ್ತಿರುವಾಗಲೇ ಭಂಗವoತನಲ್ಲಿ ಐಕ್ಯರಾದ ಶ್ರೀನಿಧಿ ದೇವನಿಗೆ ಪ್ರಿಯರಾದವರು. ಹಾಗಾಗಿಯೇ ತನ್ನತ್ತ ಸೆಳೆದುಕೊಂಡ ಎಂದು ಹಿರಿಯರಾದ ಶ್ರೀನಿವಾಸ ಅಡಿಗ ಕೊರವಡಿ ಶ್ರೀನಿಧಿಯನ್ನು ಸ್ತುತಿಸಿದರು. ರೋಟರಿ ಕ್ಲಬ್ ಕೋಟ ಸಿಟಿ ಮಾಜಿ ಅಧ್ಯಕ್ಷ ಡಾ. ಗಣೇಶ್ ಯು., ವಿಷ್ಣುಮೂರ್ತಿ ಉರಾಳ, ಆನ್ಸ್ ಕ್ಲಬ್ ಕೋಟ ಸಿಟಿ ಅಧ್ಯಕ್ಷೆ ಶಶಿಕಲಾ ಗಣೇಶ್, ಶಾರದಾ ಸತೀಶ್ ಪೂಜಾರಿ, ಲತಾ ಉದಯ್ ಕುಮಾರ್ ಶೆಟ್ಟಿ, ಕೊಮೆ ಗೋಪಾಲ ಪೂಜಾರಿ, ಗುರು ಲಂಬೋದರ ಹೆಗಡೆ, ಶ್ರೀಧರ್ ಪುರಾಣಿಕ, ಇಂಬಾಳಿ ಜೆ.ಸಿ. ಚಂದ್ರ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ನುಡಿ ನಮನದ ಬಳಿಕ ಯಶಸ್ವಿ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಗಾನ ನಮನ ರಂಗದಲ್ಲಿ ನೆರವೇರಿತು.
ತೆಕ್ಕಟ್ಟೆ ಹಯಗ್ರೀವದಲ್ಲಿ ಅಕ್ಟೋಬರ್ 19ರಂದು ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರೋಟರಿ ಕ್ಲಬ್ ಕೋಟ ಸಿಟಿ, ಆನ್ಸ್ ಕ್ಲಬ್ ಕೋಟ ಸಿಟಿ ಹಾಗೂ ಮಹಂಕಾಳಿ ಫ್ರೆಂಡ್ಸ್ ಕೊರವಡಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ಮೃತಿಗಳಲ್ಲಿ ಶ್ರೀನಿಧಿ’ ಶ್ರೀನಿಧಿ ಉಪಾಧ್ಯ ಸಂಸ್ಮರಣೆಯಲ್ಲಿ ರೋಟರಿ ಕ್ಲಬ್ ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್ ಮೃತರ ಸಮಾಜಿಕ ಕಾರ್ಯಗಳನ್ನು ಸ್ಮರಿಸಿದರು. ರೋಟರಿ ಕ್ಲಬ್ ಕೋಟ ಸಿಟಿ ಮಾಜಿ ಅಧ್ಯಕ್ಷ ಡಾ. ಗಣೇಶ್ ಯು., ವಿಷ್ಣುಮೂರ್ತಿ ಉರಾಳ, ಆನ್ಸ್ ಕ್ಲಬ್ ಕೋಟ ಸಿಟಿ ಅಧ್ಯಕ್ಷೆ ಶಶಿಕಲಾ ಗಣೇಶ್ ಇದ್ದರು.
Leave a Reply