Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜನತಾ ಪ್ರೀಮಿಯರ್ ಲೀಗ್ 2025 ಕ್ರೀಡಾಕೂಟ

ಕೋಟ: ಜನತಾ ಸಮೂಹ ಸಂಸ್ಥೆಗಳ ವತಿಯಿಂದ ಜನತಾ ಸಿಬ್ಬಂದಗಳಿಗಾಗಿ ನಡೆಸಲ್ಪಟ್ಟ ಜನತಾ ಪ್ರೀಮಿಯರ್ ಲೀಗ್ 2025 ಕ್ರೀಡಾಕೂಟವು ಯಶಸ್ವಿಯಾಗಿ ಬುಧವಾರ ನಡೆಯಿತು.

ಜನತಾ ಸಂಸ್ಥೆಯ ಮುಖ್ಯಸ್ಥರಾದ ಆನಂದ ಸಿ ಕುಂದರ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ ಜನತಾ ಪರಿವಾರ ಸುಮಾರು 13 ವರ್ಷಗಳಿಂದ ಈ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬಂದಿದೆ ಮತ್ತು ಇದರಿಂದ ನಾವು ನಮ್ಮ ಜನತಾ ಪರಿವಾರದೊಂದಿಗೆ ಇನ್ನಷ್ಟು ಬೆರೆಯಲು ಸಹಕಾರಿಯಾಗಿದೆ ಎಂದರು.

ಸoಸ್ಥೆಯ ಆಡಳಿತ ನಿರ್ದೇಶಕರಾದ ಪ್ರಶಾಂತ್ ಎ ಕುಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆ ಹೊಸ ಆಲೋಚನೆಯೊಂದಿಗೆ  60 ಗಜಗಳ ಕ್ರಿಕೆಟ್ ನಡುವೆ 30 ಗಜಗಳ ನೈಜ ಕ್ರಿಕೆಟ್ ಮತ್ತು ಪ್ರತಿ ತಂಡದಲ್ಲಿ ಓರ್ವ 14 ವರ್ಷದ ಜನತಾ ಸಂಸ್ಥೆಯ ಸಿಬ್ಬಂದಿಗಳ ಮನೆಯ ಯುವ ಪ್ರತಿಭೆಯನ್ನು ಆಡಿಸುವ ವಿಶೇಷ ಆಲೋಚನೆ ನಮ್ಮ ಸಂಸ್ಥೆಯ ಸಿಬ್ಬಂದಿಗಳ ಕ್ರಿಕೆಟ್ ಸುಸ್ಥಿರ ಭವಿಷ್ಯವನ್ನು ಗಟ್ಟಿ ಗೊಳಿಸುತ್ತದೆ ಅಂದರು.

ಕಾರ್ಯಕ್ರಮದಲ್ಲಿ ಜನತಾ ಸಿಬ್ಬಂದಿಗಳ ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸಿ ಬಹುಮಾನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕೋಟ ಪಡುಕರೆ ಲಕ್ಷ್ಮಿ ಸೋಮಬಂಗೇರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ನಾಯಕ ,ಸಂಸ್ಥೆಯ ನಿರ್ದೇಶಕರಾದ ರಕ್ಷಿತ್ ಕುಂದರ್, ದಿವ್ಯಲಕ್ಷ್ಮೀ ಕುಂದರ್, ವೈಷ್ಣವಿ ಕುಂದರ್ , ಮುಖ್ಯ ಲೆಕ್ಕಾಧಿಕಾರಿ ಅಶ್ವಥ್ ಜೆ ಶೆಟ್ಟಿ, ಎ ಜಿ ಎಂ ಶ್ರೀನಿವಾಸ್ ಕುಂದರ್, ಕಾರ್ಖಾನೆಯ ವ್ಯವಸ್ಥಪಕರಾದ ಮಿಥುನ್ ಕುಮಾರ್ ಅರುಣ್ ಮೆಂಡನ್  ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನ ರವಿಕಿರಣ ನಿರೂಪಿಸಿ, ಮೇಘ ಮತ್ತು ದೀಕ್ಷಿತಾ  ಸಹಕರಿಸಿದರು.

ಜನತಾ ಪ್ರೀಮಿಯರ್ ಲೀಗ್ 2025 ರ ವಿನ್ನರ್ ಆಗಿ ಭಗತ್ ಇಲೆವೆನ್ ಜನತಾ ಮತ್ತು ರನ್ನರ್ ಆಗಿ ಜನತಾ ನವಮಿ ತಂಡ ಮೂಡಿ ಬಂದು ಸರಣಿ ಶ್ರೇಷ್ಠ ಪ್ರಶಸ್ತಿ ಪ್ರಕಾಶ್ ಪಡುಕೋಣೆ ಪಡೆದುಕೊಂಡರು.

ಜನತಾ ಸಮೂಹ ಸಂಸ್ಥೆಗಳ ವತಿಯಿಂದ ಜನತಾ ಸಿಬ್ಬಂದಗಳಿಗಾಗಿ ನಡೆಸಲ್ಪಟ್ಟ ಜನತಾ ಪ್ರೀಮಿಯರ್ ಲೀಗ್ 2025 ಕ್ರೀಡಾಕೂಟವನ್ನು ಜನತಾ ಸಂಸ್ಥೆಯ ಮುಖ್ಯಸ್ಥರಾದ ಆನಂದ ಸಿ ಕುಂದರ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಸಂಸ್ಥೆಯ ಆಡಳಿತ ನಿರ್ದೇಶಕರಾದ ಪ್ರಶಾಂತ್ ಎ ಕುಂದರ್, ಕೋಟ ಪಡುಕರೆ ಲಕ್ಷ್ಮಿ ಸೋಮಬಂಗೇರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ನಾಯಕ ,ಸಂಸ್ಥೆಯ ನಿರ್ದೇಶಕರಾದ ರಕ್ಷಿತ್ ಕುಂದರ್, ದಿವ್ಯಲಕ್ಷ್ಮೀ ಕುಂದರ್, ವೈಷ್ಣವಿ ಕುಂದರ್ ಇದ್ದರು.

Leave a Reply

Your email address will not be published. Required fields are marked *