
ಕೋಟ: ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಳದಲ್ಲಿ ಗೋ ಪೂಜೆಯನ್ನು ಸಡಗರದಿಂದ ಆಚರಿಸಲಾಯಿತು. ಅರ್ಚಕ ಪಾರಂಪಳ್ಳಿ ಮಿಥುನ ಅಡಿಗ ಮೂಲಕ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ರಶ್ಮಿ ದಂಪತಿ ಶ್ರದ್ಧಾ ಭಕ್ತಿಯಿಂದ ಪೂಜಾ ವಿಧಿ ವಿಧಾನಗಳೊಂದಿಗೆ ಗೋಗ್ರಾಸವನ್ನು ನೀಡಿದರು.
ಈ ವೇಳೆ ಮಾತನಾಡಿದ ಕಾರಂತರು ಗೋ ಪಾಲಕ ಸುಬ್ಬ ಮರಕಾಲರ ಸೇವಾ ಕಾರ್ಯವನ್ನು ಶ್ಲಾಘಿಸಿ, ಗೋ ಸಾನಿಧ್ಯವು ಕ್ಷೇತ್ರದ ಏಳಿಗೆಗೆ ಪೂರಕವಾಗಿದ್ದು, ಭಕ್ತ ಸಮುದಾಯದ ಮೆಚ್ಚುಗೆ ಗಳಿಸಿದೆ ಎಂದರು
ಈ ಸಂದರ್ಭದಲ್ಲಿ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ತುಂಗ, ದೇವಕಾರಿ ರಘುರಾಮ ಹೆಬ್ಬಾರ, ಪೂಜಾ ಸಹಾಯಕ ಸಿಬ್ಬಂದಿ ನಾಗಭೂಷಣ ಹೆಬ್ಬಾರ ಮತ್ತು ರಾಮಚಂದ್ರ ಭಟ್ಟ, ದೇವಳದ ಪ್ರಬಂಧಕ ನಾಗರಾಜ ಹಂದೆ, ಸಹಾಯಕ ಪ್ರಬಂಧಕ ಗಣೇಶ ಭಟ್ಟ, ಪ್ರಧಾನ ಬಾಣಸಿಗ ಸುಬ್ರಹ್ಮಣ್ಯ ಐತಾಳ, ಸಹಾಯಕ ಬಾಣಸಿಗ ಸಂಪತ್ ಮಧ್ಯಸ್ಥ, ಸಿಬ್ಬಂದಿ ಶಂಕರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಳದಲ್ಲಿ ಗೋ ಪೂಜೆಯನ್ನು ಸಡಗರದಿಂದ ಆಚರಿಸಲಾಯಿತು. ಅರ್ಚಕ ಪಾರಂಪಳ್ಳಿ ಮಿಥುನ ಅಡಿಗ ಮೂಲಕ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ರಶ್ಮಿ ದಂಪತಿ ಶ್ರದ್ಧಾ ಭಕ್ತಿಯಿಂದ ಪೂಜಾ ವಿಧಿ ವಿಧಾನಗಳೊಂದಿಗೆ ಗೋಗ್ರಾಸವನ್ನು ನೀಡಿದರು. ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ತುಂಗ, ದೇವಕಾರಿ ರಘುರಾಮ ಹೆಬ್ಬಾರ, ಪೂಜಾ ಸಹಾಯಕ ಸಿಬ್ಬಂದಿ ನಾಗಭೂಷಣ ಹೆಬ್ಬಾರ ಮತ್ತು ರಾಮಚಂದ್ರ ಭಟ್ಟ ಇದ್ದರು.
Leave a Reply