
ಯೋಗಬಾಲೆ ತನುಶ್ರೀ ಪಿತ್ರೋಡಿ 50 ನಿಮಿಷದಲ್ಲಿ 333 ಆಸನಗಳನ್ನು ಮಾಡುವ ಮೂಲಕ 10 ನೇ ವಿಶ್ವ ದಾಖಲೆ ಮಾಡಿದ್ದಾರೆ.ಬೆಹರೈನ್ ಕನ್ನಡ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದ್ದಾರೆ.
ಈ ಹಿಂದೆ ಅದಮಾರು ಪರ್ಯಾಯ ಸಂದರ್ಭ 45 ನಿಮಿಷದಲ್ಲಿ 245 ಆಸನಗಳನ್ನು ಮಾಡುವ ಮೂಲಕ ದಾಖಲೆ ಮಾಡಿದ್ದರು.ಇದೀಗ ತನ್ನ ದಾಖಲೆಯನ್ನು ತಾನೇ ಮುರಿಯುವ ಮೂಲಕ 10 ನೇ ವಿಶ್ವ ದಾಖಲೆಯನ್ನು ಮಾಡಿದ್ದಾರೆ.ಬೆಹರೈನ್ ಕನ್ನಡ ಸಂಘ ದ ಅಧ್ಯಕ್ಷ ಅಜಿತ್ ಬಂಗೇರ, ಬೆಹರಿನ್ ಯೋಗ ಅಸೋಸಿಯೇಷನ್ ಅಧ್ಯಕ್ಷೆ ಫಾತಿಮಾ ಅಲ್ ಮನ್ಸೂರಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನ ಮನೀಶ್ ಬಿಷೋಯಿ ಬೆಹರೈನ್ ಇಂಡಿಯನ್ ಸ್ಕೂಲ್ ಚಯರ್ ಮೆನ್ ಮಾನ್ ಬಿನು ಮನ್ನಿಲ್ ವರ್ಗಿಸ್, ಬೆಹರಿನ್ ಕೇರಲಿಯ ಸಮಾಜಮ್ ಅಧ್ಯಕ್ಷ ಪಿ.ವಿ.ರಾದಕೃಷ್ಣ ಪಿಳ್ಳೆ,ಬೆಹರಿನ ಇಂಡಿಯನ್ ಕ್ಲಬ್ ಅಧ್ಯಕ್ಷ ಜೋಸೆಫ್ ಜಾಯ್,ಯೂನಿಕೋ ಗ್ರೂಪ್ ಬೆಹರಿನ ಸಿ.ಐ.ಒ ಜಯಶಂಕರ್ ವಿಶ್ವನಾಥಾನ್, ಸಂದ್ಯಾ ಉದಯ ದಂಪತಿ, ರಾಘವೇಂದ್ರ ದೇವಾಡಿಗ, ರೀತು ಶ್ರೀ ಬೆಹರಿನ್ ಕನ್ನಡ ಸಂಘ ದ ರಾಮ್ ಪ್ರಸಾದ್ ಅಮ್ಮೆನಡ್ಕ, ನಿತಿನ್ ಶೆಟ್ಟಿ, ಈಶ್ವರ್ ಅಂಚನ್, ಹರಿನಾಥ್ ಸುವರ್ಣ, ಹರಿಣಿ ಶೆಟ್ಟಿ, ಪುಲಿಕೇಶಿ, ಹರೀಶ್ ಗೌಡ ಮೊದಲದವರು ಉಪಸ್ಥಿತರಿದ್ದರು.













Leave a Reply