
ಕೋಟ: ಬ್ರಹ್ಮಾವರ ತಾಲೂಕಿನ ಕೋಟ ವಲಯದ ಕೋಟತಟ್ಟು ಕಾರ್ಯಕ್ಷೇತ್ರದ ಶ್ರೀ ನಂದಿಕೇಶ್ವರ ಮಹಿಳಾ ಜ್ಞಾನವಿಕಾಸ ಕೇಂದ್ರದಲ್ಲಿ ಹೊಲಿಗೆ ತರಬೇತಿ ಕೇಂದ್ರವನ್ನು ಕೋಟವಲಯದ ಜನಜಾಗೃತಿ ಅಧ್ಯಕ್ಷ ಜಯರಾಮ್ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಹೊಲಿಗೆ ಕಲಿತು ಮಹಿಳೆಯರು ಹೊಲಿಯಲು ಪ್ರಾರಂಭಿಸಿದರೆ ತನ್ನ ಸಂಸಾರವನ್ನುಉತ್ತಮ ರೀತಿಯಿಂದ ನಿರ್ವಹಣೆ ಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮಾವರ ತಾಲೂಕು ಯೋಜನಾಧಿಕಾರಿಯಾದ ರಮೇಶ್ ಪಿ.ಕೆ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸರಸ್ವತಿ,ತಾಲೂಕು ಜನಜಾಗ್ರತಿ ವೇದಿಕೆ ಸದಸ್ಯರಾದ ಚಂದ್ರ ಆಚಾರ್ಯ, ಒಕ್ಕೂಟದ ಅಧ್ಯಕ್ಷೆ ಪ್ರೇಮ, ಶೌರ್ಯ ವಿಪತ್ತು ಸದಸ್ಯರಾದ ಭಾಸ್ಕರ ಆಚಾರ್ಯ ಮತ್ತು ರಮೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜ್ಞಾನವಿಕಾಸ ಸಮನ್ವಯ ಅಧಿಕಾರಿ ಪುಷ್ಪಲತಾ ನಿರೂಪಿಸಿದರು, ಕೋಟ ವಲಯದ ಮೇಲ್ವಿಚಾರಕರಾದ ನಾಗೇಶ್ ಎನ್ ಸ್ವಾಗತಿಸಿದರು. ತರಬೇತಿ ಶಿಕ್ಷಕಿ ಶೋಭಾ ಶ್ರೀಯಾನ್ ವಂದಿಸಿದರು.
ಶ್ರೀ ನಂದಿಕೇಶ್ವರ ಮಹಿಳಾ ಜ್ಞಾನವಿಕಾಸ ಕೇಂದ್ರದಲ್ಲಿ ಹೊಲಿಗೆ ತರಬೇತಿ ಕೇಂದ್ರವನ್ನು ಕೋಟವಲಯದ ಜನಜಾಗೃತಿ ಅಧ್ಯಕ್ಷ ಜಯರಾಮ್ ಶೆಟ್ಟಿ ಉದ್ಘಾಟಿಸಿದರು. ಬ್ರಹ್ಮಾವರ ತಾಲೂಕು ಯೋಜನಾಧಿಕಾರಿಯಾದ ರಮೇಶ್ ಪಿ.ಕೆ, ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸರಸ್ವತಿ,ತಾಲೂಕು ಜನಜಾಗ್ರತಿ ವೇದಿಕೆ ಸದಸ್ಯರಾದ ಚಂದ್ರ ಆಚಾರ್ಯ, ಒಕ್ಕೂಟದ ಅಧ್ಯಕ್ಷೆ ಪ್ರೇಮ ಇದ್ದರು.














Leave a Reply