
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಹಾಡಿಯಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು 1) ಅನಿಲ್ (31),ದೇವಲ್ಕುಂದ ಗ್ರಾಮ ಕುಂದಾಪುರ, 2) ಪೂರ್ಣೇಶ (25), ದೇವಲ್ಕುಂದ ಗ್ರಾಮ ಕುಂದಾಪುರ, 3) ರಘು (39),ಕೆಂಚನೂರು ಗ್ರಾಮ, ಕುಂದಾಪುರ, 4) ಯೋಗೀಶ (39) ಎಂದು ಗುರುತಿಸಲಾಗಿದೆ.
ಪ್ರಕರಣ ಸಾರಾಂಶ : ದಿನಾಂಕ 26/10/2025 ರಂದು ನಾಸಿರ್ ಹುಸೇನ್, ಪೊಲೀಸ್ ಉಪನಿರೀಕ್ಷಕರು (ಕಾ&ಸು), ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರಿಗೆ ಇಸ್ಪೀಟು ಜುಗಾರಿ ಆಟದ ಬಗ್ಗೆ ದೊರೆತ ಮಾಹಿತಿ ಮೇರೆಗೆ ಕಾವ್ರಾಡಿ ಗ್ರಾಮದ ಮರಾಸಿ ರಸ್ತೆಯಲ್ಲಿ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ಅಂದರ್ – ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದವರ ಮೇಲೆ ದಾಳಿ ನಡೆಸಿ ಇಸ್ಪೀಟ್ ಜುಗಾರಿ ಆಡುತ್ತಿದ್ದ 1) ಅನಿಲ್ (31),ದೇವಲ್ಕುಂದ ಗ್ರಾಮ ಕುಂದಾಪುರ, 2) ಪೂರ್ಣೇಶ (25), ದೇವಲ್ಕುಂದ ಗ್ರಾಮ ಕುಂದಾಪುರ, 3) ರಘು (39),ಕೆಂಚನೂರು ಗ್ರಾಮ, ಕುಂದಾಪುರ, 4) ಯೋಗೀಶ (39), ದೇವಲ್ಕುಂದ ಗ್ರಾಮ, ಕುಂದಾಪುರ ಇವರನ್ನು ವಶಕ್ಕೆ ಪಡೆದು, ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ್ದ ಪ್ಲಾಸ್ಟಿಕ್ ಶೀಟ್ ಮೇಲೆ ಇದ್ದ ಒಟ್ಟು 2,480/- ರೂಪಾಯಿ, ನೀಲಿ ಬಣ್ಣದ ಪ್ಲಾಸ್ಟಿಕ್ -1, ಇಸ್ಪೀಟ್ ಎಲೆಗಳು, ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ, ಮೊಬೈಲ್-2 ಸ್ವಾಧೀನ ಪಡಿಸಿಕೊಂಡಿರುವುದಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2025 ಕಲಂ: 87 KP Act ರಂತೆ ಪ್ರಕರಣ ದಾಖಲಾಗಿರುತ್ತದೆ.














Leave a Reply