Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಾರ್ಕಡದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಕೋಟ: ಗೆಳೆಯರ ಬಳಗ ಕಾರ್ಕಡ, ಸಾಲಿಗ್ರಾಮ ಹಾಗೂ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಸಾಹಿತಿ ಕೆ. ಜಿ . ಸೂರ್ಯನಾರಾಯಣ ಮಯ್ಯ  ಕನ್ನಡ ಧ್ವಜನಮನ, ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿ ಕನ್ನಡ ಮಾಧ್ಯಮದ ಶಾಲೆಯನ್ನು ಉಳಿಸಬೇಕೆಂದು ಕರೆ ನೀಡಿ ನಾವು ಪ್ರತಿಯೊಬ್ಬರೂ ನಮ್ಮನ್ನು ನಾವು ಪ್ರೀತಿಸಬೇಕು ಆಗ ಮಾತ್ರ ನಾವು ಬೇರೆಯವರನ್ನೂ ಪ್ರೀತಿಸಬಹುದು ನಮ್ಮ ನಾಡು ನಮ್ಮ ಹೆಮ್ಮೆಯ ಭಾಷೆ ಕನ್ನಡ ನಮ್ಮ ರಾಜ್ಯ ನಮ್ಮ ದೇಶ ಹೀಗೆ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ,ಭಾಷಾ ಅಭಿಮಾನ ಬೇಕು.ದುರಭಿಮಾನ ಒಳ್ಳೆಯದಲ್ಲ. ಮಕ್ಕಳೂ ಸೇರಿದಂತೆ ಎಲ್ಲರೂ ಕನ್ನಡ ಪುಸ್ತಕ ಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಕರೆಕೊಟ್ಟರು.

ಶಾಲಾ ನಿವೃತ್ತ ಅಧ್ಯಾಪಕ  ನಾರಾಯಣ ಆಚಾರ್ಯ, ಶಾಲಾ ಸಂಚಾಲಕ ಎನ್.ಪ್ರಭಾಕರ ಕಾಮತ್ ,ಶಾಲಾ ಎಸ್.ಡಿ.ಎಂ. ಸಿ ಅಧ್ಯಕ್ಷ ಗುರುರಾಜ್ ಉಪಾಧ್ಯ, ಗೆಳೆಯರ ಬಳಗದ ಕಾರ್ಯಕಾರಿ ಮಂಡಳಿಯ ಕೆ. ತಮ್ಮಯ್ಯ, ಜಗದೀಶ ಆಚಾರ್ಯ, ರಘಭಂಡಾರಿ, ಶ್ರೀಪತಿ ಆಚಾರ್ಯ. ಶ್ರೀಕಾಂತ ಐತಾಳ, ರಾಘವೇಂದ್ರ, ಶಾಲಾ ಅಧ್ಯಾಪಕ ವೃಂದ, ಸ್ಥಳೀಯರು, ಎಸ್ .ಡಿ. ಎಂ ಸಿ .ಸದಸ್ಯರು,ಶಾಲಾ ಮಕ್ಕಳು ಉಪಸ್ಥಿತರಿದ್ದರು. ನಂತರ ಮಕ್ಕಳಿಗೆ ಸಿಹಿತಿಂಡಿ ಹಂಚಲಾಯಿತು. ನoತರ  ಶಾಲಾ ಮಕ್ಕಳಿಗೆ ಲಿಖಿತ ರಸಪ್ರಶ್ನೆ  ಏರ್ಪಡಿಸಲಾಯಿತು. ಬಳಗದ  ಅಧ್ಯಕ್ಷ  ಕೆ . ತಾರಾನಾಧ ಹೊಳ್ಳ ಸ್ವಾಗತಿಸಿ, ಕಾರ್ಯದರ್ಶಿ ಕೆ. ನಾಗರಾಜ ಉಪಾಧ್ಯ ವಂದಿಸಿದರು.  ಬಳಗದ ಉಪಾಧ್ಯಕ್ಷ ಕೆ. ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿದರು.

ಗೆಳೆಯರ ಬಳಗ ಕಾರ್ಕಡ, ಸಾಲಿಗ್ರಾಮ ಹಾಗೂ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಸಾಹಿತಿ ಕೆ. ಜಿ . ಸೂರ್ಯನಾರಾಯಣ ಮಯ್ಯ  , ಶಾಲಾ ನಿವೃತ್ತ ಅಧ್ಯಾಪಕ  ನಾರಾಯಣ ಆಚಾರ್ಯ, ಶಾಲಾ ಸಂಚಾಲಕ ಎನ್.ಪ್ರಭಾಕರ ಕಾಮತ್ ,ಶಾಲಾ ಎಸ್.ಡಿ.ಎಂ. ಸಿ ಅಧ್ಯಕ್ಷ ಗುರುರಾಜ್ ಉಪಾಧ್ಯ, ಬಳಗದ  ಅಧ್ಯಕ್ಷ  ಕೆ . ತಾರಾನಾಧ ಹೊಳ್ಳ ಇದ್ದರು.

Leave a Reply

Your email address will not be published. Required fields are marked *