ಕೋಟ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಅಖಿಲ ಭಾರತೀಯ ಸುಸಂಘಟಿತ ಭತ್ತ ಅಭಿವೃದ್ಧಿ ಯೋಜನೆ, ಕೃಷಿ ವಿಜ್ಞಾನ ಕೇಂದ್ರ ಗ್ರಾಮೀಣ ಕೃಷಿ ಹವಾಮಾನ ವಿಭಾಗ, ಬ್ರಹ್ಮಾವರ ಕೃಷಿ ಇಲಾಖೆ, ಉಡುಪಿ ಮತ್ತು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ ಜಿಲ್ಲಾ ಪಂಚಾಯತ್, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸಹ್ಯಾದ್ರಿ ಬ್ರಹ್ಮ ಕೆಂಪು ಅಕ್ಕಿ ಹತ್ತದ ತಳಿ ಕ್ಷೇತ್ರೋತ್ಸವ ಹವಾಮಾನ ಆಧಾರಿತ ಕೃಷಿ ರೈತ ತರಬೇತಿ ಕಾರ್ಯಕ್ರಮ ರಮೇಶ್ ಹೇರ್ಳೆ ಪಾರಂಪಳ್ಳಿ, ಸಾಲಿಗ್ರಾಮ ಇವರ ಕೃಷಿ ಕ್ಷೇತ್ರದಲ್ಲಿ ಮಂಗಳವಾರ ಜರಗಿತು.
ಕಾರ್ಯಕ್ರಮವನ್ನು ಬ್ರಹ್ಮಾವರ ತಾಲೂಕು ಕೃಷಿಕರ ಸಮಾಜ ಇದರ ಅಧ್ಯಕ್ಷ ಪಿ. ವೈಕುಂಠ ಹೇರ್ಳೆ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಸಂಶೋಧ ಸಹನಿರ್ದೇಶಕ ಡಾ. ಧನಂಜಯ ಬಿ. ವಹಿಸಿದ್ದರು. ತಾಂತ್ರಿಕ ಕೈಪಿಡಿಯನ್ನು ಉಡುಪಿ ಕೃಷಿ ಸಹಾಯಕ ನಿರ್ದೇಶಕ ಪೂಜಾ ನಾಯಕ್, ಬ್ರಹ್ಮಾವರ ವ.ಕೃ.ತೋ.ಸಂ.ಕೇoದ್ರ ನಿವೃತ್ತ ಸಹ ಪ್ರಾಧ್ಯಾಪಕ
ಪಿ. ಶ್ರೀಧರ ಹೇರ್ಳೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪಾರಂಪಳ್ಳಿಯ ಪ್ರಗತಿಪರ ಕೃಷಿಕರಾದ ರಮೇಶ್ ಹೇರ್ಳೆ ಪಿ ಸನ್ಮಾನಿಸಲಾಯಿತು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ರೇವಣ್ಣ ರೇವಣ್ಣವರ್, ಕೃಷಿ ಇಂಜಿನಿಯರಿoಗ್ ವಿಭಾಗದ ಪ್ರಾಧ್ಯಾಪಕ ವಿ.ಆರ್. ವಿನೋದ್ , ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಶಂಕರ, ವಲಯ ಕೃಷಿ ಮತ್ತು ತೋಟಗಾರುಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ ಸಹಾಯಕ ಪ್ರಾಧ್ಯಾಪಕಿ ಡಾ. ಶ್ರೀದೇವಿ ಮತ್ತು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಗುಂಡ್ಮಿ ಪ್ರಗತಿಪರ ಕೃಷಿಕ ನಾಗೇಶ ಮಯ್ಯ, ಉಪಸ್ಥಿತರಿದ್ದರು. ಆರು ಭತ್ತದ ತೆನೆ ಅದರ ಬಗ್ಗೆ ಸಮಗ್ರ ಮಾಹಿತಿ ನೀಡಿಲಾಯಿತು. ಡಾ. ಕೆ.ವಿ. ಸುಧೀರ್ ಕಾಮತ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಜಿ.ಕೆ.ಎಂ.ಎಸ್. ತಾoತ್ರಿಕ ಅಧಿಕಾರಿ ಪ್ರವೀಣ್ ಕೆ.ಎಂ ನಿರೂಪಿಸಿ ವಂದಿಸಿದರು.
ರಮೇಶ್ ಹೇರ್ಳೆ ಪಾರಂಪಳ್ಳಿ, ಸಾಲಿಗ್ರಾಮ ಇವರ ಕೃಷಿ ಕ್ಷೇತ್ರದಲ್ಲಿ ಸಹ್ಯಾದ್ರಿ ಬ್ರಹ್ಮ ಕೆಂಪು ಅಕ್ಕಿ ಹತ್ತದ ತಳಿ ಕ್ಷೇತ್ರೋತ್ಸವ ಹವಾಮಾನ ಆಧಾರಿತ ಕೃಷಿ ರೈತ ತರಬೇತಿ ಕಾರ್ಯಕ್ರಮವನ್ನು ಬ್ರಹ್ಮಾವರ ತಾಲೂಕು ಕೃಷಿಕರ ಸಮಾಜ ಇದರ ಅಧ್ಯಕ್ಷ ಪಿ. ವೈಕುಂಠ ಹೇರ್ಳೆ ಉದ್ಘಾಟಿಸಿದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ರೇವಣ್ಣ ರೇವಣ್ಣವರ್, ಕೃಷಿ ಇಂಜಿನಿಯರಿoಗ್ ವಿಭಾಗದ ಪ್ರಾಧ್ಯಾಪಕ ವಿ.ಆರ್. ವಿನೋದ್ , ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಶಂಕರ , ವಲಯ ಕೃಷಿ ಮತ್ತು ತೋಟಗಾರುಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ ಸಹಾಯಕ ಪ್ರಾಧ್ಯಾಪಕಿ ಡಾ. ಶ್ರೀದೇವಿ ಇದ್ದರು.















Leave a Reply