ಕೋಟ: ಇಲ್ಲಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಬೆಳ್ಳಿ ರಥ ಮಂಗಳವಾರ ಕೋಟೇಶ್ವರದ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಇವರ ವಿಶೇಷ ಮುತುವರ್ಜಿಯಲ್ಲಿ ಶ್ರೀ ಕುಕ್ಕೆ ದೇಗುಲದ ಬೆಳ್ಳಿ ರಥಕ್ಕೆ ಕೋಟದ ಅಮೃತೇಶ್ವರೀ ದೇಗುಲ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ದೇಗುಲ ಟ್ರಸ್ಟಿಗಳಾದ ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು , ಚಂದ್ರ ಆಚಾರ್, ಸುಬ್ರಾಯ ಜೋಗಿ ಬರಮಾಡಿಕೊಂಡು ದೇಗುಲದ ಅರ್ಚಕರಾದ ಕೃಷ್ಣ ಜೋಗಿಯವರ ಸಮ್ಮುಖದಲ್ಲಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕುಕ್ಕೆ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಹರೀಷ್ ಇಂಜಾಡಿ ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿಯವರಿಗೆ ಪ್ರಸಾದ ವಿತರಿಸಿ ಶಾಲು ಹೋದಿಸಿ ಗೌರವಿಸಿದರು. ಸ್ಥಳೀಯರಾದ ದೇವದಾಸ್ ಕಾಂಚನ್, ರಾಘವೇoದ್ರ ಕುಂದರ್, ಕೇಶವ ಆಚಾರ್, ಪಾಂಡುರoಗ ಹೆಗ್ಡೆ ಮತ್ತಿತರರು ಇದ್ದರು.
ಇಲ್ಲಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಬೆಳ್ಳಿ ರಥ ಮಂಗಳವಾರ ಕೋಟೇಶ್ವರದ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಇವರ ವಿಶೇಷ ಮುತುವರ್ಜಿಯಲ್ಲಿ ಶ್ರೀ ಕುಕ್ಕೆ ದೇಗುಲದ ಬೆಳ್ಳಿ ರಥಕ್ಕೆ ಕೋಟದ ಅಮೃತೇಶ್ವರೀ ದೇಗುಲ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.















Leave a Reply