ಕೋಟ: ನಮ್ಮ ಮೊಬೈಲ್ ನಲ್ಲಿ ಹತ್ತಾರು ಆ್ಯಪ್ ಗಳಿರುತ್ತವೆ ಹಾಗೂ ಇವುಗಳನ್ನು ಬಳಸುವಾಗ ಕ್ಯಾಮರ ಸೇರಿದಂತೆ ವಿವಿಧ ಮೂಲಗಳು ಇತರರಿಗೆ ನಮ್ಮ ವೈಯ್ಯಕ್ತಿಕ ಮಾಹಿತಿ ಸಿಗುವ ರೀತಿ ಸೆಟ್ಟಿಂಗ್ಸ್ ನಲ್ಲಿ ಅನುಮತಿ ನೀಡಿರುತ್ತೇವೆ. ಇದನ್ನು ದುರುಪಯೋಗ ಪಡಿಸಿಕೊಳ್ಳುವ ಸೈಬರ್ ಅಪರಾಧಿಗಳು ನಮ್ಮನ್ನು ಸುಲಭವಾಗಿ ವಂಚಿಸುತ್ತಾರೆ. ಹೀಗಾಗಿ ಯಾವುದೇ ಆ್ಯಪ್ ಬಳಕೆ ಮಾಡುವ ಮೊದಲು ಜಾಗೃತಿ ಅಗತ್ಯ ಎಂದು ಮಣಿಪಾಲ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ತಿಳಿಸಿದರು.
ಅವರು ನ.2ರಂದು ಯಡ್ತಾಡಿಯಲ್ಲಿ ಸೌಜನ್ಯ ಯುವಕ ಮಂಡಲ ಆಶ್ರಯದಲ್ಲಿಜರಗಿದಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೈಬರ್ ಅಪರಾಧಿಗಳು ಪ್ರತಿದಿನ ಹೊಸ-ಹೊಸ ಮಾರ್ಗಗಳ ಮೂಲಕ ನಮ್ಮನ್ನು ವಂಚಿಸಲು ಪ್ರಯತ್ನಿಸುತ್ತಿರುತ್ತಾರೆ. ಇವರ ವಂಚನೆಯ ಜಾಲಕ್ಕೆ ನಾವು ಬಲಿಯಾಗದಂತೆ ಎಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ ಹಾಗೂ ಹಿರಿಯರಿಗೆ ಕೂಡ ಈ ಬಗ್ಗೆ ಮಾಹಿತಿ ನೀಡುವುದು ಅಗತ್ಯ ಎಂದರು. ಸೌಜನ್ಯ ಯುವಕ ಮಂಡಲ ಅಧ್ಯಕ್ಷ ಗಣೇಶ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಂವಾದ ನಡೆಯಿತು.
ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಮಾತನಾಡಿದರು. ರಾಷ್ಟ್ರಪತಿ ಪದಕ ಪುರಸ್ಕೃತ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬಂದಿ ಶಂಕರ್ ಅವರನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಗಣೇಶ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಅಶೋಕ್ ಮಳಬಾಗಿ, ಚಾಮುಂಡೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷವಿಟ್ಠಲ ಹೆಗ್ಡೆ ಹೆಗ್ಡೆರಮನೆ ಇದ್ದರು. ಸಂಘದ ಸದಸ್ಯರಾದ ಶೇಖರ್ನಾಯ್ಕ ಸ್ವಾಗತಿಸಿ, ಸುಬ್ರಹ್ಮಣ್ಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ಮಹೇಶ್ ನಾಯ್ಕ ವಂದಿಸಿದರು.
ಯಡ್ತಾಡಿಯಲ್ಲಿ ಸೌಜನ್ಯ ಯುವಕ ಮಂಡಲ ಆಶ್ರಯದಲ್ಲಿ ಜರಗಿದ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬಂದಿ ಶಂಕರ್ ಅವರನ್ನು ಗೌರವಿಸಲಾಯಿತು. ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ, ಸಂಘದ ಅಧ್ಯಕ್ಷ ಗಣೇಶ್ ನಾಯ್ಕ್ ಇದ್ದರು.















Leave a Reply