ಸಾಹಿತ್ಯ ಮತ್ತು ಸಮಾಜ ಒಂದು ನಾಣ್ಯದ ಎರಡು ಮುಖಗಳು. ಸಾಹಿತ್ಯ ಸಮಾಜದ ಪ್ರತಿಬಿಂಬ. ಸಮಾಜದಲ್ಲಿ ಇರುವ ಭಾವನೆಗಳ ಅಭಿವ್ಯಕ್ತಿಯಾಗಿ ಸಾಹಿತ್ಯ ಕೃತಿಗಳು ನಿರ್ಮಾಣವಾಗುತ್ತವೆ. ಭಾವನೆಗಳಿದ್ದರೆ ಮಾತ್ರ ಸಾಹಿತ್ಯ ಅರ್ಥವಾಗುತ್ತವೆ. ಕವಿಗಳು, ಕಥೆಗಾರರು, ನಾಟಕಕಾರರು ತಮ್ಮ ಸಾಮಾಜಿಕ ಜೀವನದ ಅನುಭವದಿಂದ ಮತ್ತು ಆಲೋಚನೆಗಳ ಸೃಜನಶೀಲತೆಯಿಂದ ಸಾಹಿತ್ಯ ಕೃತಿಗಳನ್ನು ರಚಿಸುತ್ತಾರೆ.
ಸಾಹಿತ್ಯವೆಂಬುದು ಅಭಿವ್ಯಕ್ತಿಯಾದರೂ ಯಾವುದು ಸರ್ವರಿಗೂ ಹಿತವಾಗಿರುತ್ತದೆ ಅದೇ ನಿಜವಾದ ಸಾಹಿತ್ಯ ಎಂದು ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ. ಶ್ರೀಪತಿ ಹಳಗುಂದ ಹೇಳಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಶಂಕರನಾರಾಯಣ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ನಡೆದ ಸಾಹಿತ್ಯ ಮತ್ತು ಸಮಾಜ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಯುವ ಸಮುದಾಯವು ಓದುವ ಅಭ್ಯಾಸವನ್ನು ಬೆಳಸಿಕೊಳ್ಳಲು ಕರೆ ನೀಡಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ.ವಸಂತ್.ಜಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಗಂಗಾಧರ ಆರ್. ಎಚ್. ವಿಭಾಗದ ಅಧ್ಯಾಪಕ ಶ್ರೀ ಸಚಿನ್ ಎಸ್, ಶ್ರೀ ಮಹಲಿಂಗಪ್ಪ ಆರ್.ಉಪಸ್ಥಿತರಿದ್ದರು. ಕು.ಭವಾನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕು.ರತಿಕ ಸ್ವಾಗತಿಸಿದರು. ಕು.ಚೈತನ್ಯ ವಂದಿಸಿದರು. ಕು. ಅಕ್ಷತಾ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.















Leave a Reply