
ಕೋಟ: ಮಾನವ ಕಳ್ಳ ಸಾಗಾಣಿಕೆ ಮಾಡುವುದು, ದೌರ್ಜನ್ಯ ಎಸಗುವುದು ಒಂದು ಹೀನಕೃತ್ಯವಾಗಿದೆ. ಇದೊಂದು ಸಮಾಜಕ್ಕೆ ಅಂಟಿದ ರೋಗ, ಇದನ್ನು ತಡೆಗಟ್ಟುವಲ್ಲಿ ಪ್ರತಿಯೋಬ್ಬ ನಾಗರಿಕರು ಬದ್ಧರಾಗಿರಬೇಕು ಎಂದು ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರದ ವಕೀಲ ಮಂಜುನಾಥ್ ಹೇಳಿದರು.
ನ.11ರಂದು ಕೋಟದ ವಿವೇಕ ಪದವಿ ಪೂರ್ವ ಕಾಲೇಜು ಇಲ್ಲಿ ಓಯಾಶಿಸ್ ಇಂಡಿಯಾ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಉಡುಪಿ, ಪಡಿ ಮಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತವಾಗಿ ಆಯೋಜಿಸಿದ್ದ ಮುಕ್ತಿ ಬೈಕ್ ಚ್ಯಾಲೆಂಜ್- 2025ರ ಅಂಗವಾಗಿ ಆಯೋಜಿಸಿದ್ದ, ಮಾನವ ಕಳ್ಳ ಸಾಗಾಣಿಕೆಯ ತಡೆ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಮಾತಾನಾಡಿದರು.
ಮಾನವ ಕಳ್ಳ ಸಾಗಾಣಿಕೆ ತಡೆಯುವುದು ಎಲ್ಲರ ಕರ್ತವ್ಯ ಆಗಿದೆ. ಮಕ್ಕಳು, ಮಹಿಳೆ, ಪುರುಷ ಎನ್ನದೆ ಎಲ್ಲ ರೀತಿಯ ಜನರನ್ನು ವಿವಿಧ ಕಾರಣಗಳಿಗಾಗಿ ಕಿಡ್ನಾಪ್, ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ. ಮುಖ್ಯವಾಗಿ ಹಣದ ಆಮಿಷ, ದೌರ್ಜನ್ಯಗಳಿಂದ ಕಳ್ಳ ಸಾಗಾಣಿಕೆ ಮಾಡುತ್ತಾರೆ. ಇಂದು ಯಾರದೋ ಕುಟುಂಬದಲ್ಲಿ ಆಗಿರಬಹುದು. ಮುಂದಿನ ದಿನಗಳಲ್ಲಿ ನಮ್ಮ ಕುಟುಂಬದಲ್ಲೂ ಅಗಬಹುದು.
ಈ ಎಚ್ಚರಿಕೆಯಿಂದ ನಾವು ಎದುರಿಸಿ, ಕಳ್ಳ ಮಾನವ ಸಾಗಾಣಿಕೆ ಆಗದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹೇಳಿದರಲ್ಲದೆ ಮಾನವ ಕಳ್ಳ ಸಾಗಾಣಿಕೆ ಕಂಡುಬoದರೆ ತಕ್ಷಣ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕು. ಅನೇಕ ಸಲ ಪೊಲೀಸರಿಗೆ ಮಾಹಿತಿ ಕೊಟ್ಟರೆ ತಾವು ಸಾಕ್ಷಿ ಆಗಿ, ನ್ಯಾಯಾಲಯಕ್ಕೆ ಅಲೆಯಬೇಕಾಗುತ್ತದೆ ಎಂಬ ತಪ್ಪು ಗ್ರಹಿಕೆ ಮೂಡುತ್ತದೆ. ಆದರೆ ಸಾಕ್ಷಿದಾರ ಒಂದು ಸಲ ಮಾತ್ರ ನ್ಯಾಯಾಲಯಕ್ಕೆ ಬಂದು ಸಾಕ್ಷಿ ನುಡಿದರೆ ಸಾಕು. ಮತ್ತೇ ಅವರು ಬರುವ ಅಗತ್ಯವಿಲ್ಲ. ಆದ್ದರಿಂದ ಸಮಾಜ ಈ ಅನಿಷ್ಠವನ್ನು ತೊಲಗಿಸಲು ಧೈರ್ಯದಿಂದ ಮುಂದೆ ಬಂದು, ಮಾಹಿತಿ ಹಂಚಿಕೊಳ್ಳಬೇಕು ಎಂದರು.
ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ್ ನಾವಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾನವ ಕಳ್ಳ ಸಾಗಾಣಿಕೆ ಅಪರಾಧ ಹಾಗೂ ರಕ್ಷಣಾತ್ಮಕ ಕಾನೂನುಗಳ ಕುರಿತು ಮಾಹಿತಿ ನೀಡಿದರು. ಕುಮಾರಿ ಸಂಗೀತ, ಓಯಾಶಿಸ್ ಇಂಡಿಯಾ ಇವರು ಮಾನವ ಕಳ್ಳ ಸಾಗಣಿಕೆಯ ತಡೆ ಅಭಿಯಾನದ ಗುರಿ ಮತ್ತು ಉದ್ದೇಶದ ಕುರಿತು ತಿಳಿಸಿದರು. ನಂತರ, ಕ್ರೇಸ್ಟ್ ಯುನಿರ್ವಸಿಟಿಯ ವಿದ್ಯಾರ್ಥಿಗಳು, ಮಾನವ ಮಾರಾಟ, ಕಳ್ಳ ಸಾಗಣಿಕೆ, ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ಕುರಿತಾಗಿ ಜನಜಾಗೃತಿ ಮೂಡಿಸುವ ಬೀದಿ ನಾಟಕವನ್ನು ವಿವೇಕ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಹಿಂದಿನ ಹಳೆ ವಿದ್ಯಾರ್ಥಿ ಸಂಘದ ಸದಸ್ಯ ರಮಾನಂದ ಭಟ್ ಚೇಂಪಿ, ಜಿಲ್ಲಾ ಮಹಿಳಾ ಮಂಡಳಿ ಉಡುಪಿ ಜಿಲ್ಲಾ ಉಪಾಧ್ಯಕ್ಷೆ ರಾಧಾ ದಾಸ್, ಪಡಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೆನ್ನಿ ಡಿಸೋಜ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷೆ ತಿಲೋತ್ತಮ ನಾಯಕ್, ವಿವೇಕ ಬಾಲಕರ ಪ್ರೌಢ ಶಾಲೆ ಹಿರಿಯ ಶಿಕ್ಷಕಿ ರತಿಬಾಯಿ, ವಿವೇಕ ಬಾಲಕಿಯರ ಪ್ರೌಢ ಶಾಲೆ ಕೋಟ ಇದರ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ, ಬಾಲಕರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪ್ರೇಮನಂದ,ವಿವೇಕ ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ಪ್ರೀತಿ ರೇಖಾ ,ಓಯಾಶಿಸ್ ಸಂಸ್ಥೆಯ ಆರ್ಮುಗಂ, ಕು. ಸಂಗೀತ, ಮತ್ತು ವಿವೇಕ ಪದವಿ ಪೂರ್ವ ಕಾಲೇಜಿನ ಸಿಬ್ಬಂಧಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕೋಟದ ವಿವೇಕ ಪದವಿ ಪೂರ್ವ ಕಾಲೇಜು ಇಲ್ಲಿ ಓಯಾಶಿಸ್ ಇಂಡಿಯಾ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಉಡುಪಿ, ಪಡಿ ಮಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತವಾಗಿ ಆಯೋಜಿಸಿದ್ದ ಮುಕ್ತಿ ಬೈಕ್ ಚ್ಯಾಲೆಂಜ್- 2025ರ ಅಂಗವಾಗಿ ಆಯೋಜಿಸಿದ್ದ, ಮಾನವ ಕಳ್ಳ ಸಾಗಾಣಿಕೆಯ ತಡೆ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರದ ವಕೀಲ ಮಂಜುನಾಥ್ ಮಾತಾನಾಡಿದರು. ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ್ ನಾವಡ, ಕಾಲೇಜಿನ ಹಿಂದಿನ ಹಳೆ ವಿದ್ಯಾರ್ಥಿ ಸಂಘದ ಸದಸ್ಯ ರಮಾನಂದ ಭಟ್ ಚೇಂಪಿ, ಜಿಲ್ಲಾ ಮಹಿಳಾ ಮಂಡಳಿ ಉಡುಪಿ ಜಿಲ್ಲಾ ಉಪಾಧ್ಯಕ್ಷೆ ರಾಧಾ ದಾಸ್, ಪಡಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೆನ್ನಿ ಡಿಸೋಜ ಇದ್ದರು.












Leave a Reply