
ಕೋಟ: ಮೂರ್ತೆದಾರದ ಹೋರಾಟದ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಕೋಡಿ ಕೊರಗ ಪೂಜಾರಿಯವರಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು ಇದರ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆಗೊಳಿಸಲಾಗಿದೆ.
ಸಹಕಾರ ಚಳುವಳಿ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ನಿರಂತರ ಸೇವೆಯ ಮೂಲಕ ಜನಜನಿತರಾದ ಕೊರಗ ಪೂಜಾರಿಯವರನ್ನು ವಿಶೇಷವಾಗಿ ಗುರುತಿಸಿ ಬೆಂಗಳೂರಿನಲ್ಲಿ ನ.14ರಂದು ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಿದೆ ಎಂದು ಸಹಕಾರ ಮಹಾಮಂಡಳ ಪ್ರಕಟಣೆಯಲ್ಲಿ ತಿಳಿಸಿದೆ.












Leave a Reply