Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನ.17ಕ್ಕೆ ಕೋಟ ಅಮೃತೇಶ್ವರೀ ಯಕ್ಷಗಾನ ಮೇಳ ತಿರುಗಾಟ ಆರಂಭ, ಪ್ರಶಸ್ತಿ ಪ್ರದಾನ ಸಮಾರಂಭ

ಕೋಟ: ಇಲ್ಲಿನ ಕೋಟದ ಅಮೃತೇಶ್ವರೀ ಶ್ರೀ ದೇಗುಲದ ವತಿಯಿಂದ ನಡೆಸಲ್ಪಡುವ ದಶಾವತಾರ ಮೇಳದ 2025-26ನೇ ಸಾಲಿನ ತಿರುಗಾಟವು ನ. 17ನೇ ಸೋಮವಾರ ಆರಂಭಗೊಳ್ಳಲಿದ್ದು,ಈ ಪ್ರಯುಕ್ತ ದೇಗುಲದಲ್ಲಿ ಪೂರ್ವಾಹ್ನ 11.ಗಂಟೆಗೆ ಗಣಹೋಮ ಮತ್ತು ಗಣಪತಿ ಪೂಜೆ,ರಾತ್ರಿ ದೇವರ ಪ್ರಥಮ ಸೇವೆ ಆಟದೊಂದಿಗೆ ಪ್ರಾರಂಭವಾಗಲಿದೆ.

ಈ ದಿಸೆಯಲ್ಲಿ ಪ್ರತಿವರ್ಷದಂತೆ ರಾತ್ರಿ 8.ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಲಿದ್ದು ಸಭೆಯ ಅಧ್ಯಕ್ಷತೆಯನ್ನು ದೇಗುಲದ ಅಧ್ಯಕ್ಷ  ಆನಂದ್ ಸಿ. ಕುಂದರ್ ವಹಿಸಲಿದ್ದಾರೆ.
ಮುಖ್ಯ ಅಭ್ಯಾಗತರಾಗಿ ಸೌಕೂರು ದುರ್ಗಾಪರಮೇಶ್ವರಿ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಕಿಶನ್ ಹೆಗ್ಡೆ,ಕೋಟದ ಕಲಾಪೀಠದ ಮುಖ್ಯಸ್ಥ ಕೆ.ನರಸಿಂಹ ತುಂಗ,ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ,ಉದ್ಯಮಿ ಉಮೇಶ್ ರಾಜ್ ಬೆಂಗಳೂರು ಉಪಸ್ಥಿತರಿರಲಿದ್ದಾರೆ.

ಇದೇ ವೇಳೆ ಶ್ರೀ ಕ್ಷೇತ್ರದಿಂದ ನೀಡುವ ಪ್ರಾಚಾರ್ಯ ದಿ| ಎಮ್. ನಾರ್ಣಪ್ಪ ಉಳ್ಳೂರ ಪ್ರಶಸ್ತಿ ಖ್ಯಾತ ಭಾಗವತ ನಾರಾಯಣ ಶಬರಾಯ.ಜಿ.ವಿ, ದಿ. ಕೋಟ ವೈಕುಂಠ ಸ್ಮರಣಾರ್ಥ ಅವರ ಪುತ್ರ ಉಮೇಶ್ ರಾಜ್ ಬೆಂಗಳೂರು ಇವರು ನೀಡುವ ಕೋಟ ಯಕ್ಷಕಿನ್ನರ ಕೋಟ ವೈಕುಂಠ ಪುರಸ್ಕಾರವನ್ನು ಪ್ರಸಿದ್ಧ ಕಲಾವಿದ ಜಯಾನಂದ ಹೊಳೆಕೊಪ್ಪ ಪಡೆಯಲಿದ್ದಾರೆ.ವಿಶೇಷ ಅಭಿನಂದನೆಯನ್ನು ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಕೋಟ ಸುರೇಶ್ ಬಂಗೇರ ಸ್ವೀಕರಿಸಲಿದ್ದಾರೆ.

ನಂತರ ದೇವರ ಸೇವೆ ಭಾಗವಾಗಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *