Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ ಅಡ್ವೋಕೇಟ್ಸ್ ವೆಲ್ಫೇರ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ ಗೌರವ ಸಮರ್ಪಣೆ

ಉಡುಪಿ: ಉಡುಪಿ ಅಡ್ವೋಕೇಟ್ಸ್ ವೆಲ್ಫೇರ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ ಉಡುಪಿ ವಕೀಲರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳಿಗೆ ಗೌರವ ಸಮರ್ಪಣೆ ಇತ್ತೀಚೆಗೆ ಜರುಗಿತು.

ಉಡುಪಿ ವಕೀಲರ ಸಂಘದ ವತಿಯಿಂದ ನವೆಂಬರ್ 21 ರಂದು ನಡೆದ ವಿವಿಧ 27 ಪದಾಧಿಕಾರಿಗಳ ಚುನಾವಣೆಯಲ್ಲಿ ಒಟ್ಟು 26 ಸ್ಥಾನಗಳಿಗೆ ಸ್ಪರ್ಧಿಸಿದ ಕ್ಲಬ್ ನ ಅಭ್ಯರ್ಥಿಗಳ ಪೈಕಿ, ಜಯಪ್ರಕಾಶ್ ಕೆದ್ಲಾಯ ಹೆಚ್ ಅವರ ನೇತೃತ್ವದಲ್ಲಿ ಸ್ಪರ್ಧಿಸಿದ 18 ಅಭ್ಯರ್ಥಿಗಳು ಅತ್ಯಧಿಕ ಮತಗಳನ್ನು ಪಡೆದು ಭರ್ಜರಿ ಜಯ ಸಾಧಿಸಿದ್ದಾರೆ. ಉಪಾಧ್ಯಕ್ಷರಾಗಿ ದೇವದಾಸ್ ವಿ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಾವಿತ್ರಿ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ಮತ್ತು ಕೆಟಗರಿ ಒಂದರಲ್ಲಿ ಭರತೀಶ್ ಮತ್ತು ಅಂಬಿಕಾ ಪ್ರಭು, ಕೆಟಗರಿ ಎರಡರಲ್ಲಿ ಮಂಜುನಾಥ ನಾಗಪ್ಪ ನಾಯ್ಕ, ನಾಗಾರ್ಜುನ, ಶಾರದಾ, ಕೆಟಗರಿ ಮೂರರಲ್ಲಿ ಗುರುಪ್ರಸಾದ್ ಜಿ.ಎಸ್, ನಾಗರಾಜ ಉಪಾಧ್ಯ ಎಂ, ಕೆಟಗರಿ ನಾಲ್ಕರಲ್ಲಿ ಗುರುರಾಜ್ ಜಿ ಎಸ್, ನಾಗರಾಜ ಕಿನ್ನಿಮುಲ್ಕಿ, ಸಂತೋಷ್ ಆಚಾರ್ಯ, ಕವಿತಾ, ಕೆಟಗರಿ ಐದರಲ್ಲಿ ಶ್ರೀಶಾ ಆಚಾರ್, ಗೀತಾ ಕೌಶಿಕ್, ಸಂತೋಷ್ ಹೆಬ್ಬಾರ್ ರವರು ಜಯ ಹೊಂದಿರುತ್ತಾರೆ.

ಜಯ ಸಾಧಿಸಿದ ಅಭ್ಯರ್ಥಿಗಳನ್ನು ಗೌರವಿಸಲು, ಉಡುಪಿ ಅಡ್ವೋಕೇಟ್ಸ್ ವೆಲ್ಫೇರ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ ಕ್ಲಬ್ ಕಚೇರಿಯಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಲಬ್ ನ ಗೌರವಾಧ್ಯಕ್ಷರಾದ ಹರೆಮಕ್ಕಿ ರತ್ನಾಕರ ಶೆಟ್ಟಿ, ಮಾಜಿ ಅಧ್ಯಕ್ಷರಾದ ದೇವದಾಸ್ ಶೆಟ್ಟಿಗಾರ್, ನೂತನ ಅಧ್ಯಕ್ಷರಾದ ಜಯಪ್ರಕಾಶ್ ಕೆದ್ಲಾಯ ಹೆಚ್, ಕಾರ್ಯದರ್ಶಿ ಅಖಿಲ್ ಬಿ ಹೆಗ್ಡೆ, ಖಜಾಂಚಿಯಾದ ವೈಟಿ ರಾಘವೇಂದ್ರ ಹಾಗೂ ಪದಾಧಿಕಾರಿಗಳಾದ ವಾಣಿ ವಿ ರಾವ್, ಸುಮಿತ್, ಕಿರಣ್ ಎಸ್ ಭಟ್, ಸಂಜಯ್ ಕರ್ಕೇರಾ, ಬಾಲಚಂದ್ರ, ಮಂಜುನಾಥ ನಾಯ್ಕ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *