ಕೋಟ: ಮಕ್ಕಳ ಸಾಹಿತ್ಯ ಸಮ್ಮೇಳನದಿಂದ ಎಳವೆಯಲ್ಲಿಯೇ ಸಾಹಿತ್ಯದ ಆಸಕ್ತಿಯನ್ನು ಮೂಡಿಸಬಹುದು ಮತ್ತು ಸಾಹಿತ್ಯದ ಹೆಮ್ಮರ ವಿಶಾಲವಾಗಿ ಅರಳಲು ಸಮ್ಮೇಳನ ಪೂರಕವಾಗುತ್ತದೆ ಇಂಥ ಸಮ್ಮೇಳದ ತೀರ ಅಗತ್ಯವಿದೆ ಸಾಂಸ್ಕೃತಿಕ ಮನಸ್ಸಿನಿಂದ ಸಮಾಜ ಪ್ರಗತಿಯತ್ತ ಸಾಗುತ್ತದೆ ಎಂದು ಕುಮಾರಿ ಉನ್ನತಿ ಹಂದಟ್ಟು ನುಡಿದರು.
ಅವರು ಕೋಟದ ಕಾರಂತ ಪ್ರತಿಷ್ಠಾನ , ಕೋಟತಟ್ಟು ಗ್ರಾಮ ಪಂಚಾಯತ್, ವೇಣುಗೋಪಾಲಕೃಷ್ಣ ಎಜುಕೇಶನ್ ಸೊಸೈಟಿ ಬಾರ್ಕೂರು, ಗೀತಾನಂದ ಪೌಂಡೇಶನ್ ಮಣೂರು, ಉಸಿರು ಮತ್ತು ನೆನಪು ಕೋಟ ಇವರ ಆಸರೆಯಲ್ಲಿ ನಡೆದ ಐದನೇ ಮಕ್ಕಳ ಸಾಹಿತ್ಯ ಸಮ್ಮೇಳದಲ್ಲಿ ಸಮ್ಮೇಳನ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.
ವೇದಿಕೆಯಲ್ಲಿ ಪ್ರತಿಷ್ಠಾನದ ಗೌರವ ಅಧ್ಯಕ್ಷ ಆನಂದ ಸಿ ಕುಂದರ್, ಅತಿಥಿಗಳಾದ ಗಣೇಶ್ ಜಿ ,ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್‌ಬಾರಿಕೆರೆ, ಟ್ರಸ್ಟಿಗಳಾದ ಸುಶೀಲಾ ಸೋಮಶೇಖರ್, ಬಾಲ ನಟಿ ಸಮೃದ್ಧಿ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರೆ, ಜೊತೆ ಕಾರ್ಯದರ್ಶಿ ಸತೀಶ್ ವಡ್ಡರ್ಸೆ ನಿರೂಪಿಸಿ ವಂದಿಸಿದರು. ಬಳಿಕ ವಿವಿಧ ಗೋಷ್ಠಿಗಳು ನಡೆದವು.
ಕೋಟದ ಕಾರಂತ ಪ್ರತಿಷ್ಠಾನ , ಕೋಟತಟ್ಟು ಗ್ರಾಮ ಪಂಚಾಯತ್, ವೇಣುಗೋಪಾಲಕೃಷ್ಣ ಎಜುಕೇಶನ್ ಸೊಸೈಟಿ ಬಾರ್ಕೂರು, ಗೀತಾನಂದ ಪೌಂಡೇಶನ್ ಮಣೂರು, ಉಸಿರು ಮತ್ತು ನೆನಪು ಕೋಟ ಇವರ ಆಸರೆಯಲ್ಲಿ ನಡೆದ ಐದನೇ ಮಕ್ಕಳ ಸಾಹಿತ್ಯ ಸಮ್ಮೇಳದಲ್ಲಿ ಕುಮಾರಿ ಉನ್ನತಿ ಹಂದಟ್ಟು ಸಮ್ಮೇಳನ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಪ್ರತಿಷ್ಠಾನದ ಗೌರವ ಅಧ್ಯಕ್ಷ ಆನಂದ ಸಿ ಕುಂದರ್, ಅತಿಥಿಗಳಾದ ಗಣೇಶ್ ಜಿ ,ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್‌ಬಾರಿಕೆರೆ ಇದ್ದರು.















Leave a Reply