ಕೋಟ: ಕೋಡಿ ಕನ್ಯಾಣ ಗ್ರಾಮಸ್ಥರಿಂದ ವರ್ಷಂ ಪ್ರತಿ ನಡೆಯುವ ಶ್ರೀ ಅಮೃತೇಶ್ವರಿ ಯಕ್ಷಗಾನ ಮಂಡಳಿಯ ಯಕ್ಷಗಾನ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಪರವಾಗಿ ಸ್ಥಳೀಯ ಖ್ಯಾತ ಜ್ಯೋತಿಷಿ ಮಾಧವ್ ಉಪಾಧ್ಯಾಯ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೋಟ ಸುರೇಶ್ ಬಂಗೇರ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ರಾಮಪ್ರಸಾದಿತ ಯಕ್ಷಗಾನ ಮಂಡಳಿಯ ಅಧ್ಯಕ್ಷ ಜಗನ್ನಾಥ್ ಅಮೀನ್ , ಶ್ರೀ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಸುಭಾಷ್ ಶೆಟ್ಟಿ , ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು ಗ್ರಾಮಸ್ಥರಾದ ಅಣ್ಣಪ್ಪ ಕುಂದರ್, ವಿಜಯ ಕರ್ಕೇರ , ಭಾಸ್ಕರ್ ಪುತ್ರನ್, ರತ್ನಾಕರ್ ಪೂಜಾರಿ, ರತ್ನಾಕರ್ ಪುತ್ರನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಮೃತೇಶ್ವರಿ ಮೇಳದ ಖ್ಯಾತ ಭಾಗವತರಾದ ಹಾಲಾಡಿ ರಾಘವೇಂದ್ರ ಮಯ್ಯ ನಿರ್ವಹಿಸಿದರು.
ಕೋಡಿ ಕನ್ಯಾಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೋಟ ಸುರೇಶ್ ಬಂಗೇರ ಇವರನ್ನು ಸನ್ಮಾನಿಸಲಾಯಿತು. ಶ್ರೀ ರಾಮಪ್ರಸಾದಿತ ಯಕ್ಷಗಾನ ಮಂಡಳಿಯ ಅಧ್ಯಕ್ಷ ಜಗನ್ನಾಥ್ ಅಮೀನ್ ,ಶ್ರೀ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಸುಭಾಷ್ ಶೆಟ್ಟಿ ಇದ್ದರು.















Leave a Reply