ಸಿದ್ದಾಪುರ: ಸಿದ್ದಾಪುರ ಹಿರಿಯ ನಾಗರಿಕ ವೇದಿಕೆಯ ಆಶ್ರಯದಲ್ಲಿ ವಿಶೇಷ ಉಪನ್ಯಾಸವು ಅನುಭವ ಮಂಟಪದಲ್ಲಿ ನಡೆಯಿತು. ವಿಶೇಷ ಉಪನ್ಯಾಸ ನೀಡಿದ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಶ್ರೀ ದಿವಾಕರ ಶೆಟ್ಟಿಯವರು ಹಿರಿಯ ನಾಗರಿಕರು ತಮ್ಮನ್ನು ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಳ್ಳುವುದರ ಮೂಲಕ ಸಾಧ್ಯವಾದಷ್ಟು ಸಂತೋಷದಿಂದ ಬದುಕಬೇಕು. ಯಾವುದೇ ವಿಷಯಕ್ಕೂ ಅತಿಯಾಗಿ ಚಿಂತಿಸದೆ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಬೇಕು ಎಂದರು.
ವೇದಿಕೆಯ ಅಧ್ಯಕ್ಷ ಹೆಚ್. ಭೋಜ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ದಿನಕರ ತೋಳಾರ್ ಲೆಕ್ಕ ಪತ್ರ ಮಂಡಿಸಿದರು. ಶ್ರೀ ಟಿ. ಜಿ. ಪಾಂಡುರಂಗ ಪೈ ಸ್ವಾಗತಿಸಿದರು. ಕಡ್ರಿ ಚಂದ್ರಶೇಖರ ಶೆಟ್ಟ ಕಾರ್ಯಕ್ರಮ ನಿರೂಪಿಸಿ ಡಾ. ರಾಜೀವ ಶೆಟ್ಟಿ ವಂದಿಸಿದರು.














Leave a Reply