Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಧಿವೇಶನದಲ್ಲಿ ಕುಂದಾಪುರದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಶಾಸಕರು ಸರ್ಕಾರದ ಗಮನ ಸೆಳೆಯಲಿ : ಕೆ. ವಿಕಾಸ್ ಹೆಗ್ಡೆ

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲದ ಅಧಿವೇಶನದಲ್ಲಿ ಕುಂದಾಪುರದ ಶಾಸಕರು ಕುಂದಾಪುರ ವಿಧಾನ ಸಭಾ ಕ್ಷೇತ್ರ ಜ್ವಲಂತ ಸಮಸ್ಯೆಗಳು ಹಾಗೂ ಜನಸಾಮಾನ್ಯರ ಬಹು ವರ್ಷಗಳ ಬೇಡಿಕೆಗಳಾದ ವರಾಹಿ ನೀರಾವರಿ ಯೋಜನೆಗೆ ಕಾಯಕಲ್ಪ, ಡೀಮ್ಡ್ ಅರಣ್ಯದ ಸಮಸ್ಯೆ, ಕಾಡು ಪ್ರಾಣಿಗಳ ಹಾವಳಿಗೆ ಮುಕ್ತಿ, ಕುಂದಾಪುರ ತಾಲ್ಲೂಕು ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವುದರೊಂದಿಗೆ ಕುಂದಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ, ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರ್ ನಿರ್ಮಾಣ, ಕುಂದಾಪುರ ಅಂದರೆ ಕುಂದಾಪುರದಲ್ಲಿ  ಉಪ ಸಾರಿಗೆ ಆಯುಕ್ತರ ಕಛೇರಿ ನಿರ್ಮಾಣ, ಶೂನ್ಯ ಶಿಕ್ಷಕರ ಶಾಲೆಗೆ ಶಿಕ್ಷಕರ ನೇಮಕ, ಕರಾವಳಿಯ ಮೀನುಗಾರರ ಸಮಸ್ಯೆ, ಮೂರ್ತೆದಾರರ ಸಮಸ್ಯೆ, ಅಕ್ರಮ-ಸಕ್ರಮ, 94 ಸಿ, 94 ಸಿ ಸಿ ಹಾಗೂ 94 ಡಿ ಅರ್ಜಿ ನಮೂನೆ ಅಡಿಯಲ್ಲಿ ಭೂ ಮಂಜೂರಾತಿಗೆ ಇರುವ ಸಮಸ್ಯೆಗಳ ಪರಿಹಾರ, ಕಿಂಡಿ ಆಣೆಕಟ್ಟುಗಳ ಸಮರ್ಪಕ ನಿರ್ವಹಣೆ, ಕುಂದಾಪುರದ ಬೀದಿ ಬದಿ ವ್ಯಾಪಾರಸ್ಥರಿಗೆ ಒಂದು ಶಾಶ್ವತ ನೆಲೆ, ಭತ್ತದ ಬೆಂಬಲ ಬೆಲೆ, ಕುಂದಾಪುರದ ಹಳ್ಳಿ ಪ್ರದೇಶಗಳಿಗೆ ಸರ್ಕಾರಿ ಬಸ್ ಸೇವೆ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ, ಕೆಂಪು ಕಲ್ಲು, ಮರಳು ಇವುಗಳ ಸಮರ್ಪಕ ಪೂರೈಕೆ ಹಾಗೂ ಇವುಗಳ ಪೂರೈಕೆ ಇರುವ ಕಾನೂನು ತೊಡಕುಗಳ ನಿವಾರಣೆ, 9 ಮತ್ತು 11 ಸಮಸ್ಯೆ, ಸರ್ಕಾರಿ ಕಚೇರಿಗಳಲ್ಲಿನ ಸಿಬ್ಬಂದಿಗಳ ಕೊರತೆ ಇತ್ಯಾದಿ  ಸಮಸ್ಯೆಗಳ ಬಗ್ಗೆ ಕುಂದಾಪುರದ ಶಾಸಕರು ಪ್ರಶ್ನೆಗಳನ್ನು ಹಾಕಿ, ಗಮನ ಸೆಳೆಯುವ ಅವಧಿ ಹಾಗೂ ಶೂನ್ಯ ವೇಳೆಯಲ್ಲಿ ಈ ಎಲ್ಲಾ ಸಮಸ್ಯೆ ಹಾಗೂ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹ ಮಾಡಬೇಕಾಗಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗೃಹಿಸಿದ್ದಾರೆ.

Leave a Reply

Your email address will not be published. Required fields are marked *