Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಾರದ ಸಂತೆ ಬಂತೆಂದರೆ ಸಂಚಾರ ಸಂಕಟ

~ಸಚೀನ ಆರ್ ಜಾಧವ

ಸಾವಳಗಿ: ಗ್ರಾಮದಲ್ಲಿ ಪ್ರತಿ ಶನಿವಾರ ಸಂತೆಯ ದಿನ ಉಂಟಾಗುತ್ತಿರುವ ಮಿತಿ ಮೀರಿದ ಟ್ರಾಫಿಕ್‌ ಸಮಸ್ಯೆಯಿಂದ ನಾಗರಿಕರು ಬೇಸತ್ತು ಹೋಗಿದ್ದಾರೆ. ಸಂತೆ ಮಾರುಕಟ್ಟೆಯಲ್ಲಿ ಟ್ರಾಫಿಕ್‌ ನಿಯಮಗಳೆಲ್ಲ ಬುಡಮೇಲಾಗುವುದರಿಂದ ಜನ ಯಮಯಾತನೆ ಅನುಭವಿಸುವಂತಾಗಿದೆ.

ಇಲ್ಲಿನ ಪ್ರಮುಖ ರಸ್ತೆಗಳೆಲ್ಲವೂ ಇಕ್ಕಟ್ಟಾಗಿವೆ. ಅಂಥದ್ದರಲ್ಲಿ ವಾಹನಗಳು ಅಡ್ಡಾದಿಡ್ಡಿಯಲ್ಲಿ ಚಲಿಸಿದರೆ ಆಗುವ ತೊಂದರೆ ಅನಾಹುತಕ್ಕೆ ಯಾರು ಹೊಣೆ ಎಂದು ಹಲವು ಹಿರಿಯ ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಹಲವಾರು ತೊಂದರೆ: ಸಂತೆಗೆ ಮಹಿಳೆಯರು ವಯೋವೃದ್ಧರು ಬರಲೇಬಾರದು ಎನ್ನುವಷ್ಟು ಟ್ರಾಫಿಕ್‌ ದಟ್ಟಣೆ ಹೆಚ್ಚಾಗಿರುತ್ತದೆ. ಸಂಚಾರದ ದಟ್ಟಣೆಯಲ್ಲಿ ಪಾದಚಾರಿಗಳಿಗೆ ಒಂದೊಂದು ಹೆಜ್ಜೆಯೂ ಭಾರವೆನಿಸುತ್ತದೆ. ದ್ವಿಚಕ್ರ ವಾಹನಗಳವರಿಗೆ ಪಾಕಿಂಗ್‌ ವ್ಯವಸ್ಥೆ ಇಲ್ಲ. ಕಿರಿದಾದ ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ಸವಾರರು ಸಿಕ್ಕ ಸ್ಥಳದಲ್ಲಿ ನಿಲ್ಲಿಸಿ ಸಂತೆ ಸಾಮಗ್ರಿ ಖರೀದಿಗೆ ಹೋಗುತ್ತಾರೆ. ಈ ಸಮಸ್ಯೆ ಪರಿಹರಿಸಲು ಪೊಲೀಸ್‌ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯವರಿಗೆ ನಿಯಮಗಳು ಸೂಚಿಸಬೇಕು. ಸಂತೆ ದಿನ ಪರಸ್ಥಳದಿಂದ ಬಂದ ವ್ಯಾಪಾರಸ್ಥರು ತಮಗೆ ಬೇಕಾದ ಮುಖ್ಯ ರಸ್ತೆ ಮೇಲೆ ಕುಳಿತು ವ್ಯಾಪಾರ ಮಾಡುವುದರಿಂದ ದಟ್ಟಣೆ ಹೆಚ್ಚಾಗುತ್ತಿದೆ.

ಭಾರಿ ವಾಹನಗಳ ಸಂಚಾರದಿಂದ ನಿತ್ಯ ಒಂದಿಲ್ಲೊಂದು ಅವಘಡ ಸಂಭವಿಸುತ್ತಲೇ ಇರುತ್ತದೆ. ಇದು ವ್ಯಾಪಾರಸ್ಥರಿಗೆ ಹಾಗೂ ಸುತ್ತಲಿನ ನಿವಾಸಿಗಳಿಗೆ ಇನ್ನಿಲ್ಲದ ಕಿರಿಕಿರಿಯಾಗುತ್ತಿದೆ.

ಪ್ರತಿ ಶನಿವಾರ ಪೊಲೀಸ್ ಸಿಬ್ಬಂದಿ ನೇಮಿಸಿ: ನಗರದಲ್ಲಿ ಪ್ರತಿ ಶನಿವಾರ ಸಂತೆ ನಡೆಯುವ ಕಾರಣ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಶನಿವಾರ ಪೊಲೀಸ್ ಸಿಬ್ಬಂದಿ ನೇಮಿಸಿಬೇಕು, ಈ ಹಿಂದೆ ಪ್ರತಿ ಶನಿವಾರ ಸಿಬ್ಬಂದಿಯನ್ನು ನೇಮಿಸಿತ್ತಿದ್ದರು ಆದರೆ ಇಗಾ ಯಾವ ಸಿಬ್ಬಂದಿಯನ್ನು ಸಹ ನೇಮಿಸಿಲ್ಲಾ.

ಅಡ್ಡಾದಿಡ್ಡಿ ವಾಹನಗಳ ಪಾರ್ಕಿಂಗ್: ನಗರದಲ್ಲಿ ಪ್ರತಿ ಶನಿವಾರ ಸಂತೆ ನಡೆಯುವ ಕಾರಣ ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳು ನಿಲ್ಲಿಸಿ ತಮ್ಮ ಕೆಲಸಕ್ಕೆ ಹೋಗುತ್ತಾರೆ ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

Leave a Reply

Your email address will not be published. Required fields are marked *