ಸಾವಳಗಿ: ರೈತರು ತೊಗರಿ ಮತ್ತು ಮೆಕ್ಕೆಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ (MSP) ಸಿಗುವಂತೆ ಮತ್ತು ಬೆಳೆ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ಜಮಖಂಡಿ ತಾಲೂಕ ಅಧ್ಯಕ್ಷರು ಹಾಗೂ ಯುವ ರೈತ ಮುಖಂಡರಾದ ಸಿದ್ದುಬಾ ಬಂಡಿವಡ್ಡರ ಆಗ್ರಹಿಸಿದ್ದಾರೆ.
ಪ್ರತಿಬಾರಿ ಮಾರುಕಟ್ಟೆ ಫಸಲು ಬರುತ್ತಿದಂತೆ ಖರೀದಿದಾರರು ದಿಢೀರ್ ಬೆಲೆ ಕಡಿಮೆ ಮಾಡುತ್ತಾರೆ. ರೈತರ ಹೆಸರಲ್ಲಿ ವರ್ತಕರು ಲಾಭ ಪಡೆಯುತ್ತಿದ್ದಾರೆ. ಪ್ರಸಕ್ತ ವರ್ಷದ ಮುಂಗಾರು ಹಾಗೂ ಹಿಂಗಾರಿನ ನಿರಂತರ ಮಳೆಯಿಂದ ಮೆಕ್ಕೆಜೋಳಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಭಾರಿ ನಷ್ಟ ಉಂಟು ಮಾಡಿದೆ. ಕಳಪೆ ಬೀಜ್ ನಕಲಿ ಔಷದ ಹಾವಳಿಯಿಂದ ರೈತನ ಆದಾಯಕ್ಕೆ ಮೊದಲೇ ಪಟ್ಟು ಬೀಳುತ್ತಿದೆ. ಪ್ರತಿವರ್ಷ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ದೊರೆಯದೆ ಇರುವುದರಿಂದ ಸಂಕಷ್ಟ ಸಿಲುಕಿ ಸಾಲದ ಭಾದೆ ಎದುರಿಸುತ್ತಿದ್ದಾರೆ.
ವಿಶೇಷವಾಗಿ ಜಮಖಂಡಿ ಹಾಗೂ ಸಾವಳಗಿ ಭಾಗದ ರೈತರು ಮೆಕ್ಕೆಜೋಳಕ್ಕೆ ಕೇಂದ್ರದ MSP ₹2400ಕ್ಕೆ ರಾಜ್ಯ ಸರ್ಕಾರ ₹600 ಪ್ರೋತ್ಸಾಹಧನ ಸೇರಿಸಿ ಕ್ವಿಂಟಾಲ್ಗೆ ₹3000 ನೀಡಬೇಕೆಂದು ಹಾಗೂ ಶೀಘ್ರದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಖರೀದಿ ಕೇಂದ್ರ ಪ್ರಾರಂಭಿಸಲು ವಿಳಂಬ ನೀತಿ ಅನುಸರಿಸಿದರೇ ತಾಲ್ಲೂಕಿನ್ಯಾಂದತ ಹೋರಾಟ ಮಾಡುವದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವಿಳಂಬ ನೀತಿಯಿಂದಾಗಿ ರೈತರು ತೊಂದರೆ ಅನುಭವಿಸುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹಣಮಂತ ಬಂಡಿವಡ್ಡರ, ಸತೀಶ ಐನಾಪೂರ, ಮುತ್ತುರಾಜ ಬಂಡಿವಡ್ಡರ, ಕಿರಣ ಸುರಗೊಂಡ, ಅಕ್ಷಯ ಕಾಗವಾಡ, ಸಂತೋಷ ಮಾಳಿ, ಮದನಸಿಂಗ್ ರಜಪೂತ, ಮಲ್ಲಿಕಾರ್ಜುನ ನ್ಯಾಮಗೌಡ, ಪ್ರಕಾಶ ಮಾನೆ ಉಪಸ್ಥಿತರಿದ್ದರು.
ತೊಗರಿ ಹಾಗೂ ಗೋವಿನ ಜೋಳ ಖರೀದಿ ಕೇಂದ್ರ ಪ್ರಾರಂಭಿಸಿ














Leave a Reply