Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಗಣಿತ ಕಲಿಕಾ ಹಬ್ಬ ಆಚರಣೆ

ಬಾದಾಮಿ ತಾಲೂಕಿನ ಆಡಗಲ್ಲ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇಂದು ನಲಿ ಕಲಿ ಮಕ್ಕಳ” ಗಣಿತ ಕಲಿಕಾ ಹಬ್ಬದ” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತ್ತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಹನಮಂತ ಕಾಟನ್ನವರ್ ಅಧ್ಯಕ್ಷತೆ ವಹಿಸಿದ್ದರು. 

ಅಜಿಂ ಪ್ರೇಂಜಿ ಫೌಂಡೇಶನ್ ದ ಸಂಪನ್ಮೂಲ ವ್ಯೆಕ್ತಿಯವರಾದ ತೃಷ್ಟಿ ಸಾಳ್ವಿ ಮೇಡಂ ರವರು ಮುಖ್ಯ ಅತಿಥಿಗಳ ಸ್ಥಾನವಹಿಸಿದ್ದರು , ಪಾಲಕ ಬಂಧುಗಳಾದ ಬಸವ್ವ ಜೋಗಿನ, ಶಿವಾನಂದ್ ಹಂಡೆನ್ನವರ್, ಯಲ್ಲವ್ವ ಜೋಗಿನ, ಮುತ್ತವ್ವ ಮುಕ್ಕಣ್ಣವರ ಭಾಗವಹಿಸಿದ್ದು , ಶಾಲೆಯ ಶಿಕ್ಷಕರುಗಳಾದ ನಾಗನೂರ ಸರ್,ಪೂಜಾರ ಮಡಮ್,ವಂಕಲಕುಂಠಿ ಮೇಡಮ್, ಮನ್ನಾಪೂರ ಮೇಡಮ್, ಪರಡ್ಡಿ ಮೇಡಮ್, ಕೇಸರಿ ಮೇಡಮ್, ಕುಪ್ಪಸ್ತ ಮೇಡಮ್ ಅಂಗಡಿ ಮೇಡಂ ರವರುಗಳು ಕಾರ್ಯಕ್ರಮವನ್ನು ನಿಯೋಜನೆ ಮಾಡಿದ್ದರು,

ಈ ಕಾರ್ಯಕ್ರಮದಲ್ಲಿ ಮಕ್ಕಳು  ಮಿಮಿಕ್ರಿ,ಪಜಲ್ ಬಿಡಿಸುವುದು, ಮಗ್ಗಿ ಆಟ, ನಾನು ನನ್ನ ಕಾರ್ಡು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅತ್ಯಂತ ಉತ್ಸುಕತೆಯಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.

Leave a Reply

Your email address will not be published. Required fields are marked *