ಕೋಟ: ಸರಕಾರಿ ಪ್ರೌಢಶಾಲೆ ಗುಂಡ್ಮಿ ಸಾಸ್ತಾನ ಇಲ್ಲಿನ ಈ ಶೈಕ್ಷಣಿಕ ವರ್ಷದ ಕ್ರೀಡಾಕೂಟಕ್ಕೆ ಬ್ರಹ್ಮಾವರ ತಾಲ್ಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ ಬೆಲೂನು ಹಾರಿಸಿ ಚಾಲನೆ ನೀಡಿದರು.
ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಹಲಿ ಸದಸ್ಯೆ ಸುಲತಾ ಹೆಗ್ಡೆ ಕ್ರೀಡಾಸ್ಪರ್ಧಿಗಳಿಂದ ಗೌರವ ವಂದನೆ ಸ್ವೀಕರಿಸಿದರೆ , ಸಾಸ್ತಾನದ ಬ್ರಹ್ಮಬೈದರ್ಕಳ ದೈವಸ್ಥಾನದ ಮಹಿಳಾ ಅಧ್ಯಕ್ಷೆ ರತ್ನಾ .ಜೆ.ರಾಜ್ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿದರು.
ಉಡುಪಿಯ ಎಂ.ಜೆ.ಸಮಾಜ ಕಲ್ಯಾಣ ಟ್ರಸ್ಟಿನ ಅಧ್ಯಕ್ಷ ಗುರುಪ್ರಸಾದ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸುಜಾತ ವಿದ್ಯಾರ್ಥಿಗಳಿಗೆ ಶಾಲಾ ಕ್ರೀಡಾ ಸಮವಸ್ತ್ರ ವಿತರಿಸಿ ಶುಭಹಾರೈಸಿದರು.
ಶಾಲಾಭಿವೃದ್ಭಿ ಸಮಿತಿಯ ಮಾಜಿ ಅಧ್ಯಕ್ಷ ರಾಘವೇಂದ್ರ .ಜಿ, ಶಿಕ್ಷಣ ತಜ್ಞ ಗಣೇಶ್ ಚೆಲ್ಲಮಕ್ಕಿ, ಹಂಗಾರಕಟ್ಟೆ ರೋಟರಿ ಮಾಜಿ ಅಧ್ಯಕ್ಷ ಮನೋಜ್ ಕುಮಾರ್ ಹಾಗೂ ಶಾಲಾಭಿವೃದ್ದಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.ಶಾಲಾ ಮುಖ್ಯಶಿಕ್ಷಕ ಕೆ.ಸತೀಶ ಐತಾಳ ಸ್ವಾಗತಿಸಿ , ದೈಹಿಕ ಶಿಕ್ಷಣ ಶಿಕ್ಷಕಿ ವಂದಿಸಿದರು.ಸಹಶಿಕ್ಷಕ ಶ್ರೀಧರ ಶಾಸ್ತಿçಯವರು ಕಾರ್ಯಕ್ರಮ ನಿರೂಪಿಸಿದರು.
ಸರಕಾರಿ ಪ್ರೌಢಶಾಲೆ ಗುಂಡ್ಮಿ ಸಾಸ್ತಾನ ಇಲ್ಲಿನ ಈ ಶೈಕ್ಷಣಿಕ ವರ್ಷದ ಕ್ರೀಡಾಕೂಟಕ್ಕೆ ಬ್ರಹ್ಮಾವರ ತಾಲ್ಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ ಬೆಲೂನು ಹಾರಿಸಿ ಚಾಲನೆ ನೀಡಿದರು. ಉಡುಪಿಯ ಎಂ.ಜೆ.ಸಮಾಜ ಕಲ್ಯಾಣ ಟ್ರಸ್ಟಿನ ಅಧ್ಯಕ್ಷ ಗುರುಪ್ರಸಾದ, ಶಾಲಾಭಿವೃದ್ಭಿ ಸಮಿತಿಯ ಮಾಜಿ ಅಧ್ಯಕ್ಷ ರಾಘವೇಂದ್ರ .ಜಿ, ಶಿಕ್ಷಣ ತಜ್ಞ ಗಣೇಶ್ ಚೆಲ್ಲಮಕ್ಕಿ ಇದ್ದರು.














Leave a Reply