Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನಿವೃತ್ತ ಪ್ರಾಚಾರ್ಯ ಪ್ರೊ ಎ ನಾರಾಯಣ ಆಚಾರ್ಯ ನಿಧನ

ಉಡುಪಿ ಅಂಬಲಪಾಡಿ ನಿವಾಸಿ , ನಿವೃತ್ತ ಪ್ರಾಚಾರ್ಯ ಪ್ರೊ‌ಎ ನಾರಾಯಣ ಆಚಾರ್ಯರು( 87 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದರು.

ಕುಂದಾಪುರದ ಪ್ರತಿಷ್ಠಿತ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ , ವಿಭಾಗ ಮುಖ್ಯಸ್ಥರಾಗಿ ಮತ್ತು ಸುದೀರ್ಘ ಅವಧಿಗೆ ಪ್ರಾಚಾರ್ಯರಾಗಿ ಹಿಂದಿನವರು ಮುನ್ನಡೆಸಿಕೊಂಡು ಬಂದು ಪಠ್ಯದ ಜೊತೆಗೇ  ಸದಭಿರುಚಿಯ ಚಟುವಟಿಕೆಗಳನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಬಂದು ಕಾಲೇಜನ್ನು ನಾಡಿನ ಗಮನಸೆಳೆಯುವ ಶಿಕ್ಷಣ ಸಂಸ್ಥೆಯಾಗಿ ರೂಪಿಸುವಲ್ಲಿ ಅಪಾರ ಶ್ರಮಿಸಿದ್ದರು .‌ಸಾವಿರಾರು ವಿದ್ಯಾರ್ಥಿಗಳ ಪ್ರೀತಿ ಅಭಿಮಾನಪಾತ್ರರಾಗಿದ್ದರು‌.‌ ನಿವೃತ್ತಿಯ ಬಳಿಕವೂ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ವಿನಂತಿಯ ಮೇರೆಗೆ ಉಡುಪಿಯ ಉಪೇಂದ್ರ ಪೈ ಕಾಲೇಜಿನ ಪ್ರಾಚಾರ್ಯರಾಗಿಯೂ ಕೆಲವ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.‌ ಆದಿಉಡುಪಿ ಪ್ರೌಢಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ , ಓರ್ವ ಪುತ್ರ ಓರ್ವ ಪುತ್ರಿ ಹಾಗೂ ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ.‌

ಸಂತಾಪ : ಭಂಡಾರ್ ಕಾರ್ಸ್ ಕಾಲೇಜು ಮತ್ತು ಉಪೇಂದ್ರ ಪೈ ಕಾಲೇಜುಗಳ ಆಡಳಿತ ಮಂಡಳಿ , ವಿದ್ಯಾರ್ಥಿವೃಂದ ಮತ್ತು ಹಳೆ ವಿದ್ಯಾರ್ಥಿ ಸಂಘಗಳು ಅಂಬಲಪಾಡಿ ಬ್ರಾಹ್ಮಣ ಸಂಘ , ಆದಿ ಉಡುಪಿ ಪ್ರೌಢ ಶಾಲೆಯ ಆಡಳಿತ ಮಂಡಳಿಗಳು ಪ್ರೊ ಆಚಾರ್ಯರ ನಿಧನಕ್ಕೆ ಸಂತಾಪ ಸೂಚಿಸಿ , ಅವರಿಗೆ ಸದ್ಗತಿಯನ್ನು ಪ್ರಾರ್ಥಿಸಿವೆ .

Leave a Reply

Your email address will not be published. Required fields are marked *